ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

1RAಬರಿ ಕಥೆ ಕನ್ನಡ ಮೂವಿ ಮಾರ್ಚ್ 10ಕ್ಕೆ ರಾಜ್ಯಾದ್ಯಂತ ಬಿಡುಗಡೆ…..!

ಸಿಂಧನೂರು:- ಫೆ 28. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮಾನ್ವಿ ಕ್ರಿಯೇಶನ್ಸ್ ಬೇಲೂರು ಸಮಸ್ತ ಅಡಿ ನಿರ್ಮಿಸಿರುವ ಪ್ರಥಮ ಚಿತ್ರ 1RAಬರಿ ಕಥೆ ಚಿತ್ರತಂಡವು ಇಂದು ಸಿಂಧನೂರಿಗೆ ಆಗಮಿಸಿ ಪತ್ರಿಕೆ ಘೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಗೋಪಾಲ ಹಳ್ಳೆರ್ ಹೊನ್ನಾವರವರು ಇತ್ತೀಚೆಗಷ್ಟೇ ತನ್ನ ಚಿತ್ರೀಕರಣ ಮುಗಿಸಿಕೊಂಡು ಮಾರ್ಚ್ 10ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಹೇಳಿದರು. ಈ ಚಿತ್ರದ ವಿಶೇಷತೆ ಕಲ್ಯಾಣ ಕರ್ನಾಟಕ ಕಲಾವಿದರಾದ ಮರ್ದನ ರೌಡಕುಂದ ನಟಿಸಿದ್ದಾರೆ ಹಾಗೂ ಈ ಚಿತ್ರದ ಚಿತ್ರೀಕರಣವು ಸುಮಾರು 125 ದಿನ ಸಿಂಧನೂರು ತಾಲೂಕಿನಲ್ಲಿ ಚಿತ್ರಕರಣ ಮಾಡಲಾಗಿದೆ. ಹಾಗೂ ರೌಡಕುಂದ ಗ್ರಾಮದಲ್ಲಿ ಸಹ ಚಿತ್ರಿಕರಣ ಮಾಡಲಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರ ಸೆಳೆಯುವಂತ ಪಕ್ಕ ಮಾಸ್, ಕಮರ್ಷಿಯಲ್, ರೋಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್- ಥ್ರಿಲ್ಲರ್, ಸೆಂಟಿಮೆಂಟ್, ಕಥಾ ಹಂದರ ಒಳಗೊಂಡಿರುವ ಒಂದು ಕುಟುಂಬ ಸಮೇತ ಬಂದು ನೋಡುವಂತ ಚಿತ್ರವಾಗಿದೆ. ಬಹುತಾರಾಗಣ ಒಳಗೊಂಡ ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ ಗೌಡ ನಾಯಕನಾಗಿ ನಟಿಸಿದರೆ, ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ನಿರ್ಮಾಪಕ ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ನಿರ್ಮಾಣದ ಜೊತೆಗೆ ವಿಶೇಷ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸುಂದರರಾಜ್, ಕರಿಸುಬ್ಬು ,ಕಡ್ಡಿಪುಡಿ ಚಂದ್ರ, ಶಿವರಾಜ್ ಕೆಆರ್ ಪೇಟೆ ,ತಬಲ ನಾಣಿ, ಜಹಾಂಗೀರ್ ,ಗಿರೀಶ್ ಶಿವಣ್ಣ, ಮೂಗ ಸುರೇಶ್, ಎಂ ಕೆ ಮಠ ,ನವೀನ್ ಪಡೀಲ್ ,ಸಂಜು ಬಸಯ್ಯ ಮತ್ತು ಕಿರುತೆರೆ ಹಾಗೂ ಮಜಾ ಟಾಕೀಸ್ ಹಲವಾರು ಕಲಾವಿದರು ನಟಿಸಿದ್ದಾರೆ.ಹಾಗೂ ಈ ಚಿತ್ರವು ಕರ್ನಾಟಕದ ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಮತ್ತು ಚಿತ್ರ ಚಿತ್ರೀಕರಣ ನಡೆಸಿದೆ. ಪ್ರಕಾಶ್ ಅವರ ಸಾಹಿತ್ಯ ಮತ್ತು ಸಂಭಾಷಣೆ , ಡಿಫರೆಂಟ್ ಡ್ಯಾನಿ ಅವರ ಸಾಹಸ ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಅವರ ಸಂಕಲನ ಶ್ರೀವತ್ಸ ಅವರ ಸಂಗೀತ ಮತ್ತು ಚಾಮರಾಜ ರೋಹಿತ್ ಅರುಣ್ ಕೋರಿಯೋಗ್ರಾಫಿ ಈ ಚಿತ್ರಕ್ಕೆ ಇದೆ. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ತಂಡದ ಕಲಾವಿದರು ಚಿತ್ರಮಂದಿರಕ್ಕೆ ಬಂದು ಚಲನಚಿತ್ರವನ್ನು ನೋಡಿ ಹರಸಿ ಹಾರೈಸಬೇಕೆಂದು ಮನವಿ ಮಾಡಿಕೊಂಡರು.
ವರದಿ :- ವೆಂಕಟೇಶ.ಹೆಚ್. ಭೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ