ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾ5 ರಂದು ೧೩ನೇ ಅಖಿಲ ಕರ್ನಾಟಕ
ಬೆಳದಿಂಗಳ ಸಾಹಿತ್ಯ ಸಮ್ಮೇಳನ ಹಾಗೂ ಕವಿ ಗೋಷ್ಠಿ

ಉಡುಪಿ:- ಮಾ2. ಪ್ರತಿ ವರ್ಷ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಗೋಷ್ಠಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವುದಲ್ಲದೆ ಅನೇಕ ಕಾರ್ಯಕ್ರಮ ಮಾಡಿಕೊಂಡು ಬಂದಿರುತ್ತದೆ. ನಮ್ಮ ಸಮಿತಿ ಈ ವರ್ಷವು ಉಡುಪಿ ಜಿಲ್ಲೆಯ ಮೂಲ್ಕಿ ತಾಲೂಕಿನ ಪುನರೂರಿನ ಶ್ರೀ ವಿಶ್ವನಾಥ ದೇವಾಲಯ, ವೇದಿಕೆ: ಪಂಪ-ರನ್ನ-ಜನ್ನ ವೇದಿಕೆ ಪುನರೂರು ಪುಣ್ಯ ಪುರುಷರ ಸಭಾಂಗಣದಲ್ಲಿ ಮಾರ್ಚ್ 5 ರಂದು 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಈ ಸಮ್ಮೇಳನದ ಅಧ್ಯಕ್ಷರು ಅರುವ ಕೊರಗಪ್ಪ ಶೆಟ್ಟಿ ಖ್ಯಾತ ಯಕ್ಷಗಾನ ಕಲಾವಿದರು. ಸಮ್ಮೇಳನ ಉದ್ಘಾಟಕರು ಡಾ.ಹರಿಕೃಷ್ಣ ಪುನರೂರು, ಮಾಜಿ ರಾಜ್ಯ ಅಧ್ಯಕ್ಷರು ಕ.ಸಾ.ಪ ಬೆಂಗಳೂರು, ಪಟೇಲ್ ವಾಸುದೇವ ರಾವ್, ಅಧ್ಯಕ್ಷತೆ ಡಾ.ಶೇಖರ ಅಜೆಕಾರು, ಹಾಗೂ ಮಕ್ಕಳ ಮಂಟಪ: ರಾಜ್ಯ ಮಟ್ಟದ ಪ್ರತಿಭೋತ್ಸವ ಉದ್ಘಾಟಕರಾದ ಪ್ರಹ್ಲಾದಮೂರ್ತಿ ಕಡಂದಲೆ, ಅಧ್ಯಕ್ಷತೆ ಅಂಶು ಸಂಹಿತ್, ಉಪಸ್ಥಿತರು ಸುನಿಧಿ ಅಜೆಕಾರು. ಈ ಕಾರ್ಯಕ್ರಮದ ಕವಿ ಗೋಷ್ಠಿ ಅಧ್ಯಕ್ಷತೆ: ಅರುಷ ಎನ್. ಶೆಟ್ಟಿ, ಮುಂಬಯಿ ಪಂಚಭಾಷಾ ಕವಯತ್ರಿ.ಈ ಸಮ್ಮೇಳನದ
ಕವಿ ಗೋಷ್ಠಿಯಲ್ಲಿ ಪುಷ್ಪ ಮಾಳಕೊಪ್ಪ, ಬಿ. ಎಸ್. ಬಾಗೇವಾಡಿಮಠ, ರಮೇಶ್ ಮೆಲ್ಕಾರ್,
ಎ.ಸಿ.ಮಂಜುನಾಥ್, ದೀಪಕ್. ಎನ್, ಗಂಗಾಧರ ಎಸ್,
ಪ್ರಮೀಳಾ ದೀಪಕ್, ಪೆರ್ಮುದೆ, ಮುಂತಾದ
ಕವಿಗಳು ಭಾಗವಹಿಸುವರು ಮತ್ತು ವಿವಿಧ ಕ್ಷೇತ್ರಗಳಲ್ಲಿ
ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಗುತ್ತದೆ. ಈ ಸಮ್ಮೇಳನದಲ್ಲಿ ಊರಿನ ಗಣ್ಯರು, ಹಾಗೂ ಸಾಹಿತಿಗಳು, ಕವಿಗಳು ಉಪಸ್ಥಿತರಿರುವರು ಎಂದು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ರಾಜ್ಯಧ್ಯಕ್ಷರಾದ ಡಾ.ಶೇಖರ ಅಜೆಕಾರು ಅವರು ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!