ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೊನ್ನ ಕಿರಣಗಿ ಪೂಜ್ಯರು ಪುರಾಣ ಪ್ರವಚನ ಕೇಳಿಶರಣರು ಸಂತರ ತತ್ವಾದರ್ಶ ಅಳವಡಿಸಿಕೊಳ್ಳಿ

ಚಿಂಚೋಳಿ ಕಾಳಗಿ ಮತ್ತು ಕಮಲಾಪುರ: ಇಂದಿನ ಒತ್ತಡದ ಬದುಕಿನಲ್ಲಿ ಪುರಾಣ, ಪ್ರವಚನಗಳನ್ನು ಅರಿಸುವುದರಿಂದ ನೆಮ್ಮದಿ ಸಿಗುತ್ತದೆ ಎಂದು ಪೂಜ್ಯಚಂದ್ರಗೊಂಡ ಶಿವಾಚಾರ್ಯರು ಹೇಳಿದರು.

ಗೊಣಗಿ ಶ್ರೀ ಹನುಮಾನ ದೇವಸ್ಥಾನದ ಗೋಪುರ ಉದ್ಘಾಟನೆ, ಮತ್ತು ಕಳಾಸರೋಹಣ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಮಹಾ ದಾಸೋಹಿ ಶರಣಬಸವೇಶ್ವರ ರವರ ಪುರಾಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿ, ಮಹಾ ಪುರುಷರು, ಸಂತರು- ಶರಣರ ಜೀವನ ಚರಿತ್ರೆ ಅರಿಯುವುದರ ಜತೆಗೆ ಅವರ ತತ್ವಾದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದಕ್ಕಿಂತ ಪೂರ್ವದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಿಂದ ಜ್ಯೋತಿ ತೆಗೆದುಕೊಂಡು ತರಲಾಯಿತು.
ರಟಕಲ್ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಮತ್ತು ಪೂಜ್ಯ ಅಭಿನವ ರಾಚೋಟೇಶ್ವರ ಚಂದನಕ್ಕೆರ ಶ್ರೀಗಳು ಆಶೀರ್ವಚನ ನೀಡಿದರು,

ಗೊಣಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಅತಿಥಿಗಳಾಗಿ, ವೀರಣ್ಣ ಗಂಗಾಣಿ ರಟಕಲ್, ಚಂದ್ರಶೇಖರಯ್ಯ ಸ್ವಾಮಿ, ಜಗನ್ನಾಥ್ ತೆಳಮನಿ, ನಾಗಣ್ಣ ಮಾಸ್ಟರ್ ಸೇರಿ,ಹನುಮಂತರಾಯ ಜಾಡರ್ ಉದ್ಘಾಟಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿದರು. ಪ್ರಮುಖರಾದ ಚನ್ನಪ್ಪ ಗೌಡ ಪಾಟೀಲ್, ದತ್ತು ರಾಯಗೋಳ್, ದಯಾಸಾಗರ ಪಾಟೀಲ್,ಸಿದ್ದಯ್ಯ ಸ್ವಾಮಿ ಮಠಪತಿ, ಶಾಂತಕುಮಾರ್ ರೇವಗಿ, ಶಿವರಾಜ ಪಾಟೀಲ್ ಗೊಣಗಿ, ಸಿದ್ದು ಚಟ್ನಳ್ಳಿ,ರೇವ ಶೆಟ್ಟಿ ಪಾಟೀಲ್, ಶ್ರೀಮಂತ್ ಸಾಹುಕಾರ್, ಬಸಯ್ಯಸ್ವಾಮಿ ಗೊಣಗಿ, ಓಂಕಾರ್ ಮಠಪತಿ, ಬಸವರಾಜ್ ಹುಡುಗಿ, ಶಿವರಾಯ ಪಾಟೀಲ್,ದುರ್ಗಪ್ಪ ಕಟ್ಟಿಮನಿ ಇತರರಿದ್ದರು.
ಶರಣುಕುಮಾರ ಶಾಸ್ತ್ರಿ ಪುರಾಣ ನಡೆಸಿಕೊಟ್ಟರು. ಸಂಗೀತ ಸೇವೆ ಭರಮಶೆಟ್ಟಿ ಶೆಟ್ಟಿ ಪಾಟೀಲ್, ತಬಲಾ ಸೇವೆ ಷಣ್ಮುಖಯ್ಯ ಸ್ವಾಮಿ, ಸೇವೆ ಸಲ್ಲಿಸಿದರು . ವಿವೇಕ್ ಸ್ವಾಮಿ ರೇವಗಿ ಸ್ವಾಗತಿಸಿದರು, ಪರಮೇಶ್ವರ ಸದಲಾಪುರ ನಿರೂಪಣೆ ಮಾಡಿ ವಂದಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!