ಬಳ್ಳಾರಿ / ಕಂಪ್ಲಿ : ಪಟ್ಟಣದ ಸಕ್ಕರೆ ಕಾರ್ಖಾನೆ ಬಳಿಯಲ್ಲಿರುವ ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಗೆ ಒಳಪಡುವ ಪ್ರಭುಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿ ರಚಿಸಿ, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಬುಧವಾರ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸತ್ಯ, ಉಪಾಧ್ಯಕ್ಷರಾಗಿ ಎನ್.ಪ್ರತಾಪ್, ಸದಸ್ಯರಾದ ಸುನೀಲ್ ಕುಮಾರ, ವೆಂಕಟೇಶ, ಜಗದೀಶ, ನಿಂಗಮ್ಮ, ಭಾರತಿ, ಆಧಿಲಕ್ಷ್ಮಿ, ಅನೀತಾ, ಲಕ್ಷ್ಮಿ, ನರೇಂದ್ರ ಬಾಬು, ಮಹೇಶ, ಬಾಷಾ, ಉಮೇಶ, ಗಣೇಶ, ತನುಜಾ ಅವಿರೋಧವಾಗಿ ಆಯ್ಕೆಗೊಂಡರು.
ಮುಖ್ಯಗುರು ವೀರಕುಮಾರ ಇವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಮಾಲಾರ್ಪಣೆಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಸಿ.ನಾಗರಾಜ, ಮುಖಂಡರಾದ ತಿಮ್ಮಪ್ಪ, ವಿ.ಹೊನ್ನೂರಪ್ಪ, ಎನ್.ಹೊನ್ನೂರಪ್ಪ, ಎನ್.ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















