ಕಂಪ್ಲಿ: ರೈತರು ವಿವಿಧ ಉತ್ಪನ್ನ ಯೋಜನೆಗಳ ಸದುಪಯೋಗದೊಂದಿಗೆ ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ಶತಮಾನೋತ್ಸವ ಅಂಗವಾಗಿ ಕೋರಮಂಡಲ ಇಂಟರ್ನ್ಯಾಷನಲ್ ಲಿಮಿಟೆಡ್ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಚಂಡ ಮತ್ತು ಮಾರ್ವೇಕ್ಸ್ನ ಲಕ್ಕಿ ಡ್ರಾ ವಿಜೇತರಿಗೆ ಸನ್ಮಾನ ಹಾಗೂ ಹೊಸ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಲೇಜರ್, ಡಿಎಪಿ, ಯೂರಿಯಾ, ಕಾಂಪ್ಲೆಕ್ಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ರೈತರು ಬಳಕೆ ಮಾಡುವ ಮೂಲಕ ಉತ್ತಮ ಬೆಳೆಗಳೊಂದಿಗೆ ಲಾಭದಾಯದ ಜೀವನದತ್ತ ಸಾಗಬೇಕು ಎಂದರು. ನಂತರ ಪ್ರಾದೇಶಿಕ ವ್ಯವಹಾರ ಮುಖ್ಯಸ್ಥ ವಿನಯ ಎಸ್.ಎಸ್ ಮಾತನಾಡಿ, ಕೋರಮಂಡಲ್ ಇಂಟರ್‌ನ್ಯಾಶನಲ್ ರೈತರಿಗೆ ಉತ್ತಮ ಇಳುವರಿ ಮತ್ತು ಬೆಳೆಗಳ ಸಮಗ್ರ ಪೋಷಣೆಗಾಗಿ ಅತ್ಯುತ್ತಮ ರಸಗೊಬ್ಬರಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಸಸ್ಯ ಸಂರಕ್ಷಣಾ ಉತ್ಪನ್ನಗಳನ್ನು ಒದಗಿಸುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ಬೆಳೆಗಳ ಗುಣಮಟ್ಟವನ್ನು ಸುಧಾರಿಸಲು ಇವರ ಉತ್ಪನ್ನಗಳು ಹೆಚ್ಚು ನೆರವಾಗುತ್ತವೆ ಎಂದರು.
ಲಕ್ಕಿ ಡ್ರಾ ವಿಜೇತರಾದ ಮಂಜುನಾಥ, ಜಡೇಶ, ಶ್ರೀನಿವಾಸ, ಚನ್ನಬಸವ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ, ಮಾಜಿ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ತಾಲೂಕು ಕಾರ್ಯದರ್ಶಿ ಕೊಟ್ಟೂರು ರಮೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ಡಿಸಿಎಂ ಡಾ.ಸೋಮಶೇಖರ ಗುಡ್ಡದಮಠ್, ಎಂಒ ಅಧಿಕಾರಿ ಅಮರೇಶಕುಮಾರ, ಕ್ಷೇತ್ರ ಸಹಾಯಕರಾದ ಪಂಪಾನಗೌಡ, ಕೊಟ್ರೇಶಪ್ಪ, ರೈತ ಮುಖಂಡರಾದ ಶರಣಪ್ಪ, ಕೆ.ತಿರುಮಲ, ವೆಂಕಟೇಶರೆಡ್ಡಿ ಸೇರಿದಂತೆ ಅನೇಕ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















