ಪಪ್ಪಾಯ ಸಿಪ್ಪೆಯ ಪೀಠದ ನಡುವಲಿ
ಅಡಗಿದೆ ಮಣಿಗಳ ಬೊಟ್ಟು ಬೀಜಗಳಲಿ
ಅರಳಿದೆ ಲಘು ಪುಷ್ಪವು ಗುಲಾಬಿ ದಳಗಳಲಿ
ಸಿಂಗಾರವಾಗಿದೆ ಎಕ್ಕದ ಹೂವಿನ ಪಳೆಯುಳಿಕೆಯಲಿ
ಮಿನುಗಿದೆ ಕಲಾ ವೈಭವ ಸುಲಲಿತ ಚಿತ್ತಾರದಲಿ
ಹರಿದಿದೆ ಸಾಹಿತ್ಯ ಕಾವ್ಯದ ಲಹರಿ ಬಣ್ಣನೆಯಲಿ
ಬರುತಿದೆ ಮೆಲ್ಲನೆ ಕಲಾ ರಸಿಕರಲ್ಲಿಗೆ ಸುಪ್ರಭಾತದಲಿ
ಆಸ್ವಾದಿಸುತ ಕಳೆಯುವ ಇಂದಿನ ದಿನವ ಸಂತಸದಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















