ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೂತನ ತಾಲೂಕು ಅಧ್ಯಕ್ಷರಾಗಿ ಬದ್ದಿ ಮರಿಸ್ವಾಮಿ ಅವಿರೋಧ ಆಯ್ಕೆ

ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 25-06 -2026 ನೇ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರೀಯೆ ನಡೆಸಲಾಯಿತು.

ಈ ಹಿಂದೆ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಬಂಗ್ಲೆ ಮಲ್ಲಿಕಾರ್ಜುನ ಇವರ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮೂರನೇ ವರ್ಷದಲ್ಲಿ ನಡೆಯುತ್ತಿರುವ ಧ್ವನಿ ಸಂಘಟನೆಯ ಹಿಂದಿನ ಅಂದರೆ 2024-25 ಸಾಲಿನಲ್ಲಿ ಶ್ರೀ ಜಯಪ್ಪ ಚಿಗಟೇರಿ ರವರ ಅಧ್ಯಕ್ಷತೆಯಲ್ಲಿ ಸಂಘಟನೆಯ ಎಲ್ಲಾ ಆಗುಹೋಗುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಚ್ಚು ಕಟ್ಟಾಗಿ ರಾಜ್ಯಾಧ್ಯಕ್ಷರು ನೀಡಿದ ಅಧ್ಯಕ್ಷ ಗಿರಿಯನ್ನು ನಿಭಾಯಿಸಿ 2025-26 ನೇ ಸಾಲಿನಲ್ಲಿ ಕಾರಣಾಂತರಗಳಿಂದ ಧ್ವನಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.

ತದ ನಂತರದಲ್ಲಿ ಸದರಿ ಸಂಘದ ಅಧ್ಯಕ್ಷ ಸ್ಥಾನವನ್ನು ಕೊಟ್ಟೂರಿನವರೇ ಆದ ಯುವ ಉತ್ಸಾಹಿ ಶಿವರಾಜ್ ಕನಾಕಟ್ಟೆ ರವರು ವಹಿಸಿಕೊಂಡಿದ್ದರು.
ಅವರೂ ಕೂಡಾ ಸಂಘಟನೆಗೆ ಎಲ್ಲಿಯೂ ಯಾವುದೇ ರೀತಿಯ ಚ್ಯುತಿ ಬಾರದ ಹಾಗೆ ಅಚ್ಚುಕಟ್ಟಾಗಿ ನಿಭಾಯಿಸಿದರು, ನಂತರ ಕಾರಣಾಂತರಗಳಿಂದ ಶಿವರಾಜ್ ಕನ್ನಕಟ್ಟೆ ಅವರು 25-06-2026 ನೇ ಗುರುವಾರ ತಮ್ಮ ರಾಜೀನಾಮೆ ನೀಡಿದರು, ಅಂದೇ ಅಧ್ಯಕ್ಷ ಸ್ಥಾನವನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಇವರ ಅನುಮತಿಯ ಮೇರೆಗೆ ಸಂಘದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಬದ್ದಿ ಮರಿಸ್ವಾಮಿ ಇವರನ್ನು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ನಂತರ ,ಸಂಘಟನೆಯ ನೂತನ ಅಧ್ಯಕ್ಷರಾದ ಬದ್ದಿ ಮರಿಸ್ವಾಮಿ ರವರು ಮಾತನಾಡಿ ಪತ್ರಿಕೋದ್ಯಮ ಇದು ಒಂದು ಸಂವಿಧಾನದಲ್ಲಿ ಪವಿತ್ರವಾದ ನಾಲ್ಕನೆಯ ಅಂಗವಾಗಿದೆ ಇದರಲ್ಲಿ ಕಾರ್ಯ ನಿರ್ವಹಿಸುವುದು ಒಂದು ಹೆಮ್ಮೆಯ ಸಂಗತಿಯೇ ಸರಿ, ಇದು ಒಂದು ಸಮಾಜಮುಖಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದಿದೆಯಲ್ಲಾ ಅದು ಸಂತಸದ ಸಂಗತಿ ಎಂದು ಹೇಳಿದರು. ಹಾಗೂ
ಸಂಘದ ಪದಾಧಿಕಾರಿಗಳಿಗೂ ಸರ್ವ ಸದಸ್ಯರಿಗೂ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೂ ಅಭಿನಂದಿಸಿ ನೀವು ನನಗೆ ಕೊಟ್ಟಂತ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ, ಜಯಪ್ಪ ಚಿಗಟೇರಿ, ಕನಾಕಟ್ಟೆ ಶಿವರಾಜ್, ರಮೇಶ್ ಅಂಬಳಿ, ಮಾರೇಶ್, ಮಂಜುನಾಥ್. ಮೊರಗೇರಿ, ಮಣಿಕಂಠ, ಮಾರುತಿ ಬಿ. ಮತ್ತು ಪ್ರದೀಪ್ ಕುಮಾರ್, ಇನ್ನಿತರರು ಪಾಲ್ಗೊಂಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!