ಬಾಗಲಕೋಟೆ/ ಹುನಗುಂದ: 12 ನೇ ಶತಮಾನದ ಬಸವ ಶರಣರ ವಚಸಾಹಿತ್ಯವನ್ನು ಮನೆ ಮನೆಗಳಿಗೆ ನಡೆದಾಡಿ ತಾಡೋಲೆಗಳನ್ನು ಸಂಗ್ರಹಿಸಿ
ತಮ್ಮ ಮನೆಮಾರಿ ಬಂದ ಹಣದಿಂದ ಹಿತಚಿಂತಕ ಎಂಬ ಪ್ರಿಂಟಿಂಗ್ ಪ್ರೆಸ್ ತೆರೆದು ಪತ್ರಿಕೆಯ ಮೂಲಕ ಬಸವಾದಿ ಶರಣರ ವಚನ ಸಾಹಿತ್ಯವನ್ನು ಪ್ರಕಟ ಮಾಡುವ ಮೂಲಕ ಇಡೀ ವಿಶ್ವಕ್ಕೆ ಪರಿಚಯಿಸಿದ ಶರಣರು ಫ. ಗು.ಹಳಕಟ್ಟಿಯವರು ಕರೆಸಿಕೊಂಡಿದ್ದಾರೆ ಎಂದು ಚಿತ್ತರಗಿ ಇಲಕಲ್ ಗುರು ಮಹಾಂತ ಶ್ರೀಗಳು ಹೇಳಿದರು. ಬುಧವಾರ ಹುನಗುಂದ ನಗರದ ವಿ.ಎಂ.ಹೈಸ್ಕೂಲ ಸಭಾಂಗಣದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು, ವಿ.ಮ.ವಿ.ವ ಸಂಘ, ಕದಳಿ ಮಹಿಳಾ ವೇದಿಕೆಗಳು
ಹಮ್ಮಿಕೊಂಡಿದ್ದ ಫ. ಗು ಹಳಕಟ್ಟಿಯವರ 146 ನೇ ಜಯಂತ್ಯುತ್ಸವ ಹಾಗೂ 42 ನೇ
ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಹಳಕಟ್ಟಿ ಶರಣರವಚನ ಸಾಹಿತ್ಯದ ಉಳಿವಿಗಾಗಿಯೇಇಡೀ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಚನಗಳ ಸಂಶೋಧಕ ಎಂದು ಕರೆಸಿಕೊಂಡಿದ್ದಾರೆ ಎಂದರು.
ಹಳಕಟ್ಟಿಯವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ವಿ.ಮಸಂಘದ ಗೌರವ ಕಾರ್ಯದರ್ಶಿ ಡಾ.ಎಂ. ಎಸ್ ಕಡಪಟ್ಟಿ ಉದ್ಘಾಟಿಸಿ ಮಾತನಾಡಿ ಹಳಕಟ್ಟಿಯವರ ಜಯಂತ್ಯುತ್ಸವ ಸಂದರ್ಭದಲ್ಲಿ ಬಸವಣ್ಣನವರ ವಚನಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕುಎಂದರಲ್ಲದೆ
ಬಸವಾದಿ ಶರಣರ ವಚನಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಿಸಿ ಹೊರ ತ೦ದ ‘ವಚನಾಮೃತ ಸಾರ ‘ಪುಸ್ತಕವನ್ನು ಪೂಜ್ಯರು ಲೋಕಾರ್ಪಣೆ ಮಾಡಿದರು.
ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ಬಾಗಲಕೋಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಸಾಹಿತಿ
ಪ್ರೊ. ಜಿ.ಜಿ. ಹಿರೇಮಠ ಮಾತನಾಡಿ
ಬಸವಣ್ಣನವರ ಆದಿಯಾಗಿ ಸುಮಾರು 225 ಶರಣರು ಬರೆದ ವಚನಗಳನ್ನು ಸಂಗ್ರಹಿಸುವ ಮೂಲಕ ತಾವು ಯಾವದೇ ವಚನಗಳನ್ನು ಬರೆಯದೇ ಇದ್ದರೂ ಹಳಕಟ್ಟಿಯವರು ವಚನ ಪಿತಾಮಹ ಎಂದು ಕರೆಸಿಕೊಂಡಿದ್ದಾರೆ.
ಹಳಕಟ್ಟಿಯವರ ವಚನ ಸಾಹಿತ್ಯ ಸಾರ ಸಂಪುಟದ ಮೂರು ಪುಸ್ತಕಗಳನ್ನು ಪ್ರತಿಯೊಬ್ಬರು ಓದಬೇಕು ಎಂದರು. ಹಳಕಟ್ಟಿಯರ ಜಯಂತ್ಯುತ್ಸವದ ಅಂಗವಾಗಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು 13 ಪ್ರಾಥಮಿಕ ಶಾಲೆ ಹಾಗೂ 7 ಪ್ರೌಢಶಾಲೆಯ ಮಕ್ಕಳಿಗಾಗಿ ವಚನ ವಿಶ್ಲೇಷಿಸುವ,
ಕಂಠಪಾಠ ಸ್ಪರ್ಧೆ ಏರ್ಪಡಿಸಿತ್ತು
ಸ್ಪರ್ಧೆಯಲ್ಲಿ ವಿಜೇತರಾದ 64 ಮಕ್ಕಳಿಗೆ ಪೂಜ್ಯರು ಬಹುಮಾನ ವಿತರಿಸಿದರು.
ಸಭೆಯಲ್ಲಿ ದಾಸೋಹಿಗಳಾದ ಡಾ.ಕಡಪಟ್ಟಿಯವರನ್ನು, ವರ್ತಕರಾದ ಅಂದಾನೆಪ್ಪ ಹವಾಲ್ದಾರ ಅವರನ್ನು ಪೂಜ್ಯರು
ಗೌರವಿಸಿದರು. ಕಾರ್ಯಕ್ರಮದ
ಪ್ರಾರಂಭದಲ್ಲಿ ಶಿಕ್ಷಕಿ ಗೀತಾ ತಾರಿವಾಳ ಪ್ರಾರ್ಥನೆ ಮಾಡಿದರು.
ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಎಸ್.ಎನ್.ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಗಳಾದ ಸದಾಶಿವ ಗುಡಗುಂಟಿ ಮಾತನಾಡಿದರು ಸಭೆಯ ಸ್ವಾಗತವನ್ನು ಪ್ರಭು ಮಾಲಗಿತ್ತಿಮಠ ಮಾಡಿದರು.
ಸಭೆಯಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ
ಡಾ.ಶಿವಗಂಗಾ ರಂಜಣಗಿ,
ವಿ.ಮ.ಸಂಘದ ನಿರ್ದೇಶಕರಾದ
ಬಸವರಾಜ ಕೆಂದೂರ,ಎಂ.ಎಸ್ ಮಠ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪರಿಷತ್ತಿನ ಕಾರ್ಯದರ್ಶಿಯಾದ ಸಂಗಮೇಶ ಹೊದ್ಲೂರ ಹಾಗೂ ಶಿಕ್ಷಕ ಅಂದಾನಯ್ಯ ವಸ್ತ್ರದ ನಡೆಸಿದರು.
- ಕರುನಾಡ ಕಂದ ಸುದ್ದಿ




















