ಹಳದಿ ಸೇವಂತಿಗೆ ಕೆಂಬಣ್ಣದ ಬೊಟ್ಟು
ಚತುರ್ದಿಕ್ಕಿಗೆ ಗುಲಾಬಿ ದಳಗಳನಿಟ್ಟು
ಮತ್ತೆ ನಾಲ್ಕರಲ್ಲಿ ಗೊರಟೆ ಮೊಗ್ಗುಗಳ ಕಟ್ಟು
ಪುಟ್ಟ ಹೂವಿನ ಎಸಳುಗಳ ಸುತ್ತಲಿಟ್ಟು
ಸೃಜನಶೀಲ ಚಿಂತನೆಯಲಿ ಜೋಡಿಸಲು
ಮೂಡಿತು ಸುಲಲಿತ ಚಿತ್ತಾರದ ಹೊನಲು
ಓದುಗರಿಗೆ ಹೆಣೆದ ಕಾವ್ಯದಾ ಘಮಲು
ಸುಪ್ರಭಾದಲಿದು ಸುಮನಗಳಿಗಿದು ಮೀಸಲು
- ಲಲಿತಾ ಕೆ ಆಚಾರ್, ಬೆಂಗಳೂರು




















