ಕಾಳಗಿ : ತಾಲೂಕಿನ ಕೊರವಿ ಬಡಾ ತಾಂಡಾದ ಕಾಳಿಕಾ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಠ್ಠಲ್ ಮಹಾರಾಜ್ ಧಾರ್ಮಿಕ ಕಾರ್ಯಕ್ರಮ ಮೂಲಕ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.
ವಿಠ್ಠಲ್ ಮಹಾರಾಜರು ಮಾತನಾಡಿ ಲೋಕಕಲ್ಯಾಣ ಮಾನವೀಯ ಮೌಲ್ಯಗಳ ಹಾಗೂ ಪ್ರಕೃತಿ ಸೌರಕ್ಷಣೆಯ ನಮ್ಮ ಸೇವೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಧಾರ್ಮಿಕ ಚಟುವಟಿಕಗಳ ಜೊತೆ ಪರಿಸರ ಸೌರಕ್ಷಣೆ ಹಾಗೂ ಸಮಾಜಮುಖಿ ಸೇವೆಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುತ್ತಿರುವ ವಿಠ್ಠಲ್ ಮಹಾರಾಜರ ಕಾರ್ಯವನ್ನು ಮಾಡುತ್ತಿರುವುದು ಒಳ್ಳೆಯ ವಿಚಾರ ಎಂದು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಉಪಾಧ್ಯಕ್ಷರು ಸುಭಾಷ್ ರಾಠೋಡ್ ಹೇಳಿದರು.
ಈ ಸಂದರ್ಭದಲ್ಲಿ ಸಂಜುಕುಮಾರ್, ರಾಠೋಡ್, ವಿಜಯಕುಮಾರ್ ಜಾದವ್, ಸಚಿನ್ ಚವ್ಹಾಣ, ಆನಂದ್ ಜಾದವ್,ವಿಜಯಕುಮಾರ್ ಲಕ್ಷ್ಮಣ ಅವುಂಟಿ, ಕವಿರಾಜ್ ಕೊರವಿ,ಸುನಿಲ್, ಪ್ರಕಾಶ್, ವಸಂತ್ ರಾಠೋಡ್, ಓಂಕಾರ್ ಮೋತಿರಾಮ್, ಅಮರ್ ಜಾದವ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್




















