ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರಕಾರಿ ಆಯುರ್ವೇದ ಆಸ್ಪತ್ರೆಯ ವತಿಯಿಂದ ಆಯುಷ್ ಅಭಿಯಾನದ ಅಡಿಯಲ್ಲಿ ವಯೋಮಿತ್ರ ಕಾರ್ಯಕ್ರಮವನ್ನು ಗಂಗಾವತಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯ ಮುರಾರಿ ಓಣಿ ಗಂಗಾವತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ವೈದಾಧಿಕಾರಿಗಳಾದ ಡಾ. ಗುರುರಾಜ್ ಉಮಾಚಗಿಯವರು ವಹಿಸಿಕೊಂಡು ಅವರು ಮಾತನಾಡಿ ವಯೋ ವೃದ್ಧರಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಯೋಮಿತ್ರ ಎಂಬ ಕಾರ್ಯಕ್ರಮದ ಮುಖಾಂತರ ಅವರಿಗೆ ಆಯುರ್ವೇದದ ಔಷಧ ಉಪಚಾರ ಹಾಗೂ ಜೀವನಶೈಲಿಯನ್ನು ಹೇಳುವುದರ ಮುಖಾಂತರ ಅವರನ್ನು ಆರೋಗ್ಯವಂತರನ್ನಾಗಿ ಮಾಡಿ ಅವರ ವೃದ್ಯಾಪ್ಯ ಜೀವನವನ್ನು ಸುಖಕರವಾಗಿ ಇಡಲು ಅತ್ಯಂತ ಉಪಯುಕ್ತ ಕಾರ್ಯಕ್ರಮವೆಂದು ತಿಳಿಸಿದರು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಬಿ ಕೆ ಸುಲೋಚನಾ ಅಕ್ಕನವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಮುಖ್ಯಸ್ಥರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಇನ್ನೋರ್ವ ಅಕ್ಕನವರಾದ ಬಿ ಕೆ ಲಕ್ಷ್ಮಿ ಅಕ್ಕನವರು ಅವರು ಸಹಾಯ ಸಹಕಾರ ನೀಡಿದರು. ಹಾಗೂ ಮಾಜಿ ನಗರಸಭೆ ಸದಸ್ಯರಾದ ಶ್ರೀಮತಿ ಸುಮತಿ ಬಂಡಾರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಡಾಕ್ಟರ್ ವೀಣಾ ಬಿಜ್ಜಳ ಹಾಗೂ ಡಾ. ದೀಪ್ತಿ ಕುರುಬರ ವರು ಕೂಡ ಭಾಗವಹಿಸಿದ್ದರು. ಡಾ. ವೀಣಾ ಬಿಜ್ಜಳ ಮಾತನಾಡಿ ಇವತ್ತಿನ ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಮತ್ತು ನೈರ್ಮಲ್ಯತೆ ಅತಿ ಮುಖ್ಯವಾದ ವಿಷಯ ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಖಾಜಾಹುಸೇನ್ ಫಾರ್ಮಸಿ ಅಧಿಕಾರಿಗಳು ನೆರವೇರಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಚಂದ್ರಶೇಖರ ಪ್ಯಾಟಿ ನೆರವೇರಿಸಿ ಕೊಟ್ಟರು.
ಕಾರ್ಯಕ್ರಮದ ವಂದದನಾರ್ಪಣೆಯನ್ನು ಶ್ರೀ ದುರಗೇಶ ಶುಶ್ರೂಷಕ ಅಧಿಕಾರಿಗಳು ನಡೆಸಿಕೊಟ್ಟರು ಶ್ರೀಮತಿ ಸುನಿತಾ, ಫಲಾನುಭವಿಗಳ ನೋಂದಣಿಯನ್ನು ಮಾಡಿದರು ಹಾಗೂ ಯೋಗ ಶಿಕ್ಷಕರಾದ ಶ್ರೀ ಮತಿ ಜಯಶರಣಮ್ಮ ಮತ್ತು ಬಸವರಾಜ ಕಾರ್ಯಕ್ರಮದಲ್ಲಿ ದಿನನಿತ್ಯ ಮನೆಯಲ್ಲಿ ವೃದ್ದರು ಮಹಿಳೆಯರು ಮಾಡುವಂತ ಅತಿ ಸರಳವಾದ, ಉಪಯುಕ್ತವಾದ ಯೋಗಾಸನಗಳನ್ನು ಮತ್ತು ಪ್ರಾಣಾಯಾಮಗಳನ್ನು ಹೇಳಿಕೊಟ್ಟರು. ಕಾರ್ಯಕ್ರಮದಲ್ಲಿ 90 ರೋಗಿಗಳ ಮಧುಮೇಹ ಪರೀಕ್ಷೆ ಹಾಗೂ ರಕ್ತದೊತ್ತಡ ಪರೀಕ್ಷೆ ಅಲ್ಲದೆ ಎಲ್ಲರಿಗೂ ಉಚಿತ ತಪಾಸಣೆ ಹಾಗೂ ಉಚಿತವಾದ ಔಷಧಿ ವಿತರಣೆ ಮಾಡಲಾಯಿತು.




















