ಬಾಗಲಕೋಟೆ/ ಮುಧೋಳ : ಗುರುವೆಂಬ ಪದದಲ್ಲಿ ಸುಖವಿದೆ. ಗುರುವೆಂಬ ಪದದಲ್ಲಿ ಸೌಖ್ಯವಿದೆ. ಗುರುವೆಂಬ ಪದದಲ್ಲಿ ಸಕಲ ಪಡಿ ಪದಾಥ೯ವಿದೆ. ಮುಕ್ತಿ ಎಂಬುದು ಗುರುವಿನ ಪಾದದಲ್ಲಡಗಿದೆ ಎಂದು ಪ.ಪೂ.ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಗುರು ಪೌರ್ಣಮೆ ಸಂಭ್ರಮ -2026 . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಿಷ್ಕಾಮ್ಯ ಭಕ್ತಿ ಮಾಡಿ ಗುರು ಕೃಪೆ ಸಂಪಾದಿಸಬೇಕೆಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಸೇವೆಯಿಂದ ನಿವೃತ್ತರಾದ ಶ್ರೀಮತಿ ಕಸ್ತೂರಿ ಕೋರಿ ಅವರನ್ನು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಅವರು ಗೌರವಿಸಿದರು.
ಕುಳಲಿ ಗ್ರಾಮದ ಶ್ರೀ ಗುರುನಾಥಾರೂಢರ ಮಠದ ಪ.ಪೂ.ಶಂಕರಾನಂದ ಶ್ರೀಗಳ ಪಾದಪೂಜೆ ಮಾಡಿ ಗೌರವಿಸಲಾಯಿತು.
ಅನ್ನವ್ವ ಡಂಗಿ ಉಪಸ್ಥಿತರಿದ್ದರು.
ಸ್ವಾಮಿ ಗುರು ಪ್ರಸಾದ ಸ್ವಾಮೀಜಿ ಕಾಯ೯ ನಿವ೯ಹಿಸಿ ಶುಭಕೋರಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















