
ಬಳ್ಳಾರಿ / ಕಂಪ್ಲಿ : ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ರೋಗಿಗಳಿಗೆ ಉಚಿತವಾಗಿ ಹಾಲು, ಹಣ್ಣು, ಬ್ರೆಡ್ ಬುಧವಾರ ವಿತರಿಸಿದರು. ನಂತರ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿ, ಹಿಂದಿನ ಶಾಸಕ ಸ್ಥಾನದ ಎರಡು ಅವಧಿಯಲ್ಲಿ ಟಿ.ಎಚ್.ಸುರೇಶ್ ಬಾಬು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಇಂದಿಗೂ ಸಹ ಜನರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕಷ್ಟ ಕಾರ್ಪುಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ನಾಯಕ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನದಲ್ಲಿ ಮತ್ತೊಮ್ಮೆ ಶಾಸಕರನ್ನಾಗಿ ಮಾಡುವ ಮೂಲಕ ಜನಪರ ಸೇವೆಗೆ ಅನುವು ಮಾಡಿಕೊಡೋಣ. ಇವರ ಜನ್ಮದಿನದ ನಿಮಿತ್ಯ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್, ಮತ್ತು 4ನೇ ವಾರ್ಡಿನ ಸಂತೆ ಮಾರುಕಟ್ಟೆ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 180ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಪೆನ್ಸಿಲ್ ವಿತರಿಸಲಾಯಿತು.
ಸುರೇಶ್ ಬಾಬು ಅವರಿಗೆ ದೇವರು ಆಯಸ್ಸು, ಆರೋಗ್ಯದ ಜೊತೆಗೆ ಮುಂದಿನ ದಿನದಲ್ಲಿ ಮತ್ತೊಮ್ಮೆ ಶಾಸಕರನ್ನಾಗಿ ಮಾಡಲೆಂದು ಕೋರಿದರು. ಈ ಕಾರ್ಯಕ್ರಮದ ಮುಂಚಿತವಾಗಿ ಪಟ್ಟಣದ ಕೆಲ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ಡಾ.ವಿ.ಎಲ್.ಬಾಬು, ಎಸ್.ಎಂ.ನಾಗರಾಜ, ಟಿ.ವಿ.ಸುದರ್ಶನರೆಡ್ಡಿ, ಹೂಗಾರ ರಮೇಶ, ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವಿರೇಶ, ಯುವ ಮೋರ್ಚ ಜಿಲ್ಲಾ ಕಾರ್ಯದರ್ಶಿ ಎನ್.ಮನೋಜ್‌ಗೌಡ, ಗೊರ್ತಿ ಶ್ರೀನಿವಾಸ, ಮುಖಂಡರಾದ ವಿ.ವಿದ್ಯಾಧರ, ಶಿವಮೂರ್ತಿ, ಬಿ.ದೇವೇಂದ್ರ, ಚಂದ್ರಕಾಂತ, ರಾಜಾಸಾಬ್, ಎಸ್.ಚಂದ್ರಶೇಖರಗೌಡ, ಸಣ್ಣ ಕಟ್ಟೆ ದುರುಗಪ್ಪ, ಭಾಸ್ಕರ್‌ರೆಡ್ಡಿ, ವಿಶ್ವನಾಥ, ಪ್ರಶಾಂತ, ಕೆ.ರಂಗಪ್ಪ, ನಾಗರಾಜ, ಬಿ.ಕೆ.ವಿರುಪಾಕ್ಷಿ ಶಿವಕುಮಾರ, ಲಲಿತಮ್ಮ, ಪಾರ್ವತಮ್ಮ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ನೀರಿನ ಗ್ಲಾಸ್ ವಿತರಣೆ :
ಸ.ಹಿ.ಪ್ರಾ ಶಾಲೆಯಲ್ಲಿ ಮಕ್ಕಳಿಗೆ ಊಟದ ತಟ್ಟೆ, ನೀರಿನ ಗ್ಲಾಸ್ ಗಳನ್ನು ವಿತರಿಸಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್




















