ಕಂಪ್ಲಿ: ಪಟ್ಟಣದ ಅಂಬೇಡ್ಕರ್ ವೃತ್ತ ಮತ್ತು ಬಳ್ಳಾರಿ ರಸ್ತೆಯ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಅವರ ಜನ್ಮದಿನದ ಪ್ರಯುಕ್ತ ಅವರ ಸಮ್ಮುಖದಲ್ಲಿ ಆಟೋ ಚಾಲಕರಿಗೆ ಉಚಿತವಾಗಿ ಸಮವಸ್ತಗಳನ್ನು ಗುರುವಾರ ವಿತರಿಸಲಾಯಿತು.
ನಂತರ ಚಾಲಕ ಸುರೇಶ ಮಾತನಾಡಿ, ಕಂಪ್ಲಿ ಮಂಡಲ ಅಧ್ಯಕ್ಷರಾದ ಸಿ.ಡಿ.ಮಹಾದೇವ ಅವರು ಆಟೋ ಚಾಲಕರಿಗೆ ಉಚಿತವಗಿ ಸಮವಸ್ತ್ರ ನೀಡುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ. ಇವರಿಗೆ ಇನ್ನಷ್ಟು ಶಕ್ತಿ ನೀಡುವ ಜೊತೆಗೆ ಉನ್ನತ ಸ್ಥಾನ ಲಭಿಸಲಿ ಎಂದರು. ಇಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಅವರ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮೆಟ್ರಿ ಶಿವುಕುಮಾರ, ನಾಗಲಿಂಗ, ಮಹಾಂತೇಶ, ಜಡೆಪ್ಪ, ಆನಂದ, ಪುನೀತ್ ಚಾಲಕರಾದ ಸುರೇಶ, ಅನೀಫ್, ಮೈಲಾರಿ, ನಾಗರಾಜ, ವೆಂಕಟೇಶ, ಕಾರ್ತಿಕ, ಭಾರ್ಗವ, ಶಿವು, ನಾಗಲಿಂಗ ಸೇರಿದಂತೆ ಚಾಲಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















