ನಂಜನಗೂಡು ಪಟ್ಟಣವು ದಿನೇದಿನೇ ಬೆಳೆಯುವುದರ ಜೊತೆಗೆ ವಾಹನದಟ್ಟಣೆಯೂ ಹೆಚ್ಚಾಗುತ್ತಿದೆ. ಪಟ್ಟಣದ ರಾಷ್ಟ್ರಪತಿ ರಸ್ತೆ ನಗರದ ಪ್ರಮುಖ ರಸ್ತೆಯಾಗಿದ್ದು ವ್ಯಾಪಾರ ವ್ಯವಹಾರಗಳ ಕೇಂದ್ರಬಿಂದುವಾಗಿದೆ. ಹೀಗಾಗಿ ಇಲ್ಲಿ ವಾಹನದಟ್ಟಣೆ ಹೆಚ್ಚು ಇದೇ ರಸ್ತೆಯಲ್ಲಿ ರೈಲ್ವೆ ಗೇಟ್ ಇದ್ದು ರೈಲ್ವೆ ನಿಲ್ದಾಣವು ಸಮೀಪದಲ್ಲಿರುವುದರಿಂದ ರೈಲು ಬಂದು ನಿಂತರೆ ಕನಿಷ್ಠ 20ರಿಂದ 25 ನಿಮಿಷಗಳ ಕಾಲ ಗೇಟ್ ಬಂದ್ ಆಗಿರುತ್ತದೆ ಇದರಿಂದ ವಾಹನ ಸವಾರರು 20 ನಿಮಿಷಗಳ ಕಾಲ ಕಾಯದೆ ಬೇರೆ ವಿಧಿ ಇಲ್ಲ ಹೀಗಾಗಿ ಇಲ್ಲಿ ಮೇಲು ಸೇತುವೆ ನಿರ್ಮಿಸಬೇಕು ಎಂಬುದು ಪಟ್ಟಣದ ಜನರ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಆದ್ದರಿಂದ ರೈಲ್ವೆ ಗೇಟ್ ಬಳಿ ಮೇಲೆ ಸೇತುವೆಗೆ ಹೆಚ್ಚಿದ ಸಾರ್ವಜನಿಕರ ಬೇಡಿಕೆ. ನಂಜನಗೂಡು ರೈಲ್ವೆ ನಿಲ್ದಾಣದಿಂದ ಪ್ರತಿದಿನ 24 ರೈಲುಗಳ ಸಂಚಾರವಿದೆ. ಮೈಸೂರು ಬೆಂಗಳೂರು ತಿರುಪತಿ ಚೆನ್ನೈ ಮಂತ್ರಾಲಯಗಳಿಗೆ ನಂಜನಗೂಡಿನಿಂದಲೇ ನೇರವಾಗಿ ಸಂಪರ್ಕವಿದೆ ಅಲ್ಲದೆ ಆಗಾಗ ಸರಕು ಸಾಗಾಣೆಯ ಗೂಡ್ಸ್ ರೈಲು ಹಾಗೂ ಇಲಾಖೆಗೆ ಸಂಬಂಧಿಸಿದ ರೈಲುಗಳು ಈ ಮಾರ್ಗವಾಗಿ ಚಲಿಸುತ್ತದೆ ಹೀಗಾಗಿ ಪ್ರತಿ ಬಾರಿ ರೈಲು ನಿಲ್ದಾಣಕ್ಕೆ ಬಂದಾಗ ಗೇಟ್ ಅನ್ನು ಮುಚ್ಚಬೇಕಾಗುತ್ತದೆ ಇದರಿಂದ ಪ್ರತಿನಿತ್ಯ ವಾಹನ ಸವಾರರಿಗೆ ಕಿರಿಕಿರಿ ತಪ್ಪಿದ್ದಲ್ಲ ಜೊತೆಗೆ ಪಕ್ಕದಲ್ಲಿ ದೊಡ್ಡ ಕಾಲುವೆಯ ಕೊಳಚೆ ನೀರು ಹರಿಯುವುದರಿಂದ ಜೊತೆಗೆ ರಸ್ತೆ ಎರಡು ಕಡೆಗಳಲ್ಲಿ ಮಾಂಸದ ಅಂಗಡಿಗಳ ಗಬ್ಬು ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ವಾಹನ ಸವಾರರಿಗೆ ಇದೆ. ಆದ್ದರಿಂದ ಶೀಘ್ರವಾಗಿ ವಾಹನ ಸವಾರರಿಗೆ ರೈಲ್ವೆ ಮೇಲು ಸೇತುವೆಯನ್ನು ನಿರ್ಮಿಸಬೇಕಾಗಿ ಆಗ್ರಹಿಸಲಾಗಿದೆ.
- ಕರುನಾಡ ಕಂದ ಸುದ್ದಿ




















