ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಇಲಾಖೆಗಳಲ್ಲಿ ಸೇವೆಗೈದ ನಿವೃತ್ತ ಗಣ್ಯರಿಗೆ ಸನ್ಮಾನ

ಗದಗ ಜಿಲ್ಲೆಯ ರೋಣ ತಾಲೂಕು ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆಗೈದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿ. ಎಸ್. ರೆಡ್ಡೇರ,
ಉಪನ್ಯಾಸಕರಾಗಿ ಆಗಮಿಸಿದ ಪಾಂಡುರಂಗ
ಮಾರ್ಪಡೆ, ಗ್ರಾಮಪಂಚಾಯತಿ ಅಧ್ಯಕ್ಷರಾದ ಶೋಭಾ ಗೊಟಗೇರಿ ಹಾಗೂ ಅತಿಥಿಗಳು ಸೇರಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಹೊಸಳ್ಳಿ ಗ್ರಾಮದ ಎಲ್ಲಾ ಸಮಾಜದ ಗುರು ಹಿರಿಯರು ಡಾ. ಪಂಚಯ್ಯ ಹಿರೇಮಠ ನಿವೃತ್ತ ಮುಖ್ಯೋಪಾಧ್ಯಾಯರು, ಶಿವಪ್ಪ ಪರಸಪ್ಪ ತಳವಾರ ನಿವೃತ್ತ ಪಿ ಡಿ ಒ ಹೊಸಳ್ಳಿ, ಶಂಕರಗೌಡ ಪಾಟೀಲ್ ನಿವೃತ್ತ ಸಹಾಯಕ ಅಭಿಯಂತರರು ರೋಣ, ಮಲ್ಲಪ್ಪ ಹಂಪಳ್ಳಿ ನಿವೃತ್ತ ಶಿಕ್ಷಕರು ಪ್ರೌಢಶಾಲೆ ತೋರಣದಿನ್ನಿ, ಅಕ್ಬರ್ ಅಲಿ ನಿವೃತ್ತ ಸೈನಿಕರು ಹೊಸಳ್ಳಿ, ಮಲ್ಲಪ್ಪ ವಿ. ಮೇಟಿ ನಿವೃತ್ತ ಸೈನಿಕರು ಹೊಸಳ್ಳಿ ಇವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾಗಿ   ಪಾಂಡುರಂಗ ಮಾರ್ಪಡೆ ಮಾತನಾಡಿ ಗುರುಗಳೆಂದರೆ ದೇವರ ಸ್ವರೂಪ ಪಡೆದಂತೆ ಇವತ್ತು ನಮಗೆ   ಗುರುಗಳು ಶಿಕ್ಷಣ ಕಲಿಸಿ ಕೊಟ್ಟಿದ್ದಕ್ಕೆ ಜ್ಞಾನದೀವಿಗೆ  ಹೆಸರು ಬಂದಿದೆ ಎಂಬುದು ಸತ್ಯವಾದರೂ ಶಿಕ್ಷಕರನ್ನು ಪೂಜಿಸುವುದು ನಮ್ಮ ಕರ್ತವ್ಯ ಎಂದು ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ ಡಿ ಎಂ ಸಿ ಅಧ್ಯಕ್ಷರಾದ ಶಿವು ಜುಮ್ಮನಗೌಡ, ಶ್ರೀಮತಿ ಟಿ ಆರ್ ಆಲೂರು, ಪ್ರವೀಣ್, ಬಸವ ,
ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹೊಸಳ್ಳಿ ಶಿವಯೋಗಿ ತಡಿ, ರೇಖಾ ಮಾದರ, ಅನ್ನಪೂರ್ಣ ಇರಗಾರ, ಬಸಮ್ಮ ಸ್ಥಾವರಮಠ, ಕವಿತಾ ಕುರಿ, ಬಸಪ್ಪ  ಮಾರನ ಬಸರಿ, ಬಿ ಎಸ್ ರಾಥೋಡ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ ಶರಣಪ್ಪಗೌಡ ಸಕ್ಕರಗೌಡರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!