ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ 10 ಕೋಟಿ ನಶೆ ಮುಕ್ತರಾಗುವ ಪ್ರತಿಜ್ಞೆಗಳ ಮಹಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾ ವಿಶ್ವವಿದ್ಯಾಲಯದ ಓಂ ಶಾಂತಿ ರವರು ಮಕ್ಕಳಿಗೆ ಕುಡಿತದ ಬಗ್ಗೆ ಹಾಗೂ ಇತರೆ ಕೆಟ್ಟ ಚಟಗಳ ಬಗ್ಗೆ ಅವುಗಳಿಂದ ಹಾಗೂ ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ನಮ್ಮ ಕುಟುಂಬಕ್ಕೆ ಹಾನಿಯಾಗುವುದು ಹಾಗೂ ನಮ್ಮ ಗ್ರಾಮದಲ್ಲಿ ಇದೊಂದು ಬೇರೆಯವರಿಗೆ ನೋಡಿ ಕಲಿಯುವುದಾಗಲಿ ಮಾಡಬಾರದು ಈ ಕೆಟ್ಟ ಚಟಗಳಿಂದ ಮಕ್ಕಳು ಮತ್ತು ಹಿರಿಯರು ದೂರ ಇರಬೇಕೆಂದು ಎಲ್ಲರಿಗೂ ಪ್ರತಿಜ್ಞೆಯನ್ನು ಮಾಡಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕನಕದಾಸ ಬಡಾವಣೆ ವಿಜಯಪುರ ಇವರಿಂದ ಬಿ.ಕೆ ಶ್ರೀದೇವಿ ಅಕ್ಕನವರು,ಬಿ.ಕೆ.ಪದ್ಮಾ ಅಕ್ಕನವರು ಹಾಗೂ ಬಿ.ಕೆ.ಚಿದಾನಂದ ಚಂಡಿಕೆ, ಶಾಂತಕ್ಕ ನೂಲವಿ, ಮೈಲಾರಿ ಅಣ್ಣನವರು,ರಮೇಶ ವಗ್ಗರ್ ನ್ಯಾಯವಾದಿಗಳು ವಿಜಯಪುರ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿಗಾರರು ಆನಂದ್ ಎಂ ಬಳ್ಳಾರಿ



















