ಕೊಟ್ಟೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಗಸ್ಟ್ 10 ಸೋಮವಾರ ಜಗಳೂರು ತಾಲೂಕಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ಸಮಿತಿಯ ಅಧ್ಯಕ್ಷರಾದ ಪೂಜಾರ್ ಸಿದ್ದಪ್ಪನವರು ಸುದ್ದಿಗೋಷ್ಠಿ ಕುರಿತು
ದಾವಣಗೆರೆ ಜಿಲ್ಲೆ, ಜಗಳೂರು ಟೌನ್‌ನ ಗುರುಭವನದಲ್ಲಿ ಗಾನ ಲಹರಿ ಸಾಂಸ್ಕೃತಿಕ ಕಲಾವೇದಿಕೆ ಮತ್ತು ವಾಯ್ಸ್ ಆಫ್ ಜಗಳೂರು ಸಂಯುಕ್ತಾಶ್ರಯದಲ್ಲಿ “ದಿ/ಡಾ||ಎಸ್.ಜಾನಕಿ ಅಮ್ಮ ಹಾಗೂ ದಿ॥ಡಾ|ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ನೆನಪಿನಾರ್ಥ ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಸಂಘಟನಾ ಆಯೋಜಕರಾದ ಡಾ|ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಮತ್ತು ಸಮಾಜ ಸೇವಕ ಪೂಜಾರ್ ಸಿದ್ದಪ್ಪ ತುಪ್ಪದಹಳ್ಳಿ, ಎಂ.ಹೆಚ್.ಚೌಡಪ್ಪ ಬಸವನಕೋಟೆ, ನಾಗೇಶ್, ಹುಚ್ಚಂಗೀಪುರ, ವೃಷಬೇಂದ್ರ ಕೆಚ್ಚೇನಹಳ್ಳಿ, ಜಗಳೂರು ಟೌನ್‌ನಿನ ಪ್ರಕಾಶ್, ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ದೇವಿಕೆರೆ ನೇತ್ರಾವತಿ, ಕ.ರ.ವೇ ಸದಸ್ಯ ಚಂಪಾವತಿ ತಿಳಿಸಿದ್ದಾರೆ.
ದಿನಾಂಕ: 22.08.2026ರ ಶನಿವಾರ ಬೆಳಿಗ್ಗೆ 10:00 ಗಂಟೆಯಿಂದ ಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು, ಗಾಯಕರ ಧ್ವನಿ ಪರೀಕ್ಷೆ, ತಾಳ, ಲಯ ಕುರಿತು ಇಬ್ಬರು ಹಿರಿಯ ವೀಕ್ಷಕರು ಅತ್ಯುತ್ತಮ ಗಾಯಕರನ್ನು ಬಹುಮಾನಕ್ಕೆ ಆಯ್ಕೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕನ್ನಡ ಚಲನಚಿತ್ರ ಖ್ಯಾತ ಹಾಸ್ಯನಟರಾದ ಶ್ರೀ ಟೆನ್ನಿಸ್ ಕೃಷ್ಣರವರು ದಿನಾಂಕ: 23.08.2026ರಂದು ಬೆಳಿಗ್ಗೆ ಜಗಳೂರು ಪಟ್ಟಣಕ್ಕೆ ಆಗಮಿಸಲಿದ್ದಾರೆ. ಈ ರಾಜ್ಯ ಮಟ್ಟದ ಕನ್ನಡ ಕರೋಕೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.20,000/-ಸಾವಿರ ಜೊತೆಗೆ ಟ್ರೋಫಿ, ದ್ವಿತೀಯ ಬಹುಮಾನ ರೂ.15,000/-ಸಾವಿರ ಜೊತೆಗೆ ಟ್ರೋಫಿ, ತೃತೀಯ ಬಹುಮಾನ ರೂ.10,000/-ಸಾವಿರ ಜೊತೆಗೆ ಟ್ರೋಫಿ ಕಾಯ್ದಿರಿಸಲಾಗಿದೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9901635116, 9606306716.
ಈ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಎಲ್ಲಾ ಗಾಯಕರಿಗೆ ಪ್ರಮಾಣಪತ್ರ ಮೆಡಲ್ ನೀಡಲಾಗುವುದು ಮತ್ತು ಈ ಕಾರ್ಯಕ್ರಮದ ಮಧ್ಯಾಹ್ನದ ಸಮಯದಲ್ಲಿ ಸ್ಪರ್ಧಾಳುಗಳಿಗೆ ಊಟದ ವ್ಯವಸ್ಥೆ ಇರುತ್ತದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಶಾಸಕ ಶ್ರೀ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ನೇರವೇರಿಕಸಲಿದ್ದಾರೆ. ದಿ. ಡಾ|ಎಸ್.ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಮಾಜಿ ಶಾಸಕರಾದ ಶ್ರೀ ಎಸ್.ವಿ.ರಾಮಚಂದ್ರಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ. ದಿ॥ಡಾ|ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಭಾವಚಿತ್ರಕ್ಕೆ ಮಾಜಿ ಶಾಸಕರಾದ ಶ್ರೀ ಹೆಚ್.ಪಿ.ರಾಜೇಶ್ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಓ.ಓಬಣ್ಣ ಸಹಾಯಕ ಆಯುಕ್ತರು, ವಾಣಿಜ್ಯ ಇಲಾಖೆ ಬೆಂಗಳೂರು ರವರು ವಹಿಸಲಿದ್ದಾರೆ.
ಸಚಿವರಾದ ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ದಾವಣಗೆರೆ ಲೋಕಸಭಾ ಸದಸ್ಯರು ಶ್ರೀಮತಿ ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ನೂತನ ಸಚಿವರಾದ ಶ್ರೀ ಬಸವಂತಪ್ಪ ಪೌರಾಡಳಿತ ಸಚಿವರು, ಮಾಜಿ ಕೇಂದ್ರ ಸಚಿವರಾದ ಶ್ರೀ ಜಿ.ಎಂ.ಸಿದ್ದೇಶ್ವರ್, ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ಸ್ಥಳೀಯ ರಾಜಕೀಯ ಗಣ್ಯರು, ವಿವಿಧ ಸಮಾಜದ ಪದಾಧಿಕಾರಿಗಳು. ಜಗಳೂರು ತಾಲ್ಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
” ಕಲೆ ನಿಮ್ಮದು, ವೇದಿಕೆ ನಮ್ಮದು, ಪ್ರತಿಭೆ ನಿಮ್ಮದು, ವ್ಯವಸ್ಥೆ ನಮ್ಮದು ” ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಲಿದ್ದು ರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸುವ ಗಾಯಕರು ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು, ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ವರದಿ – ಗೋಣೆಪ್ಪ ಕೆ.



















