ಬಳ್ಳಾರಿ / ಕಂಪ್ಲಿ : ರಜಪೂತ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಕಂಪ್ಲಿ ರಜಪೂತ ಸಮಾಜದವರು ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಕೆ. ಇಂದ್ರಜಿತ್‌ಸಿಂಗ್ ಮಾತನಾಡಿ, ರಾಜ್ಯದ ರಜಪೂತ ಸಮುದಾಯ ದವರು ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ರಜಪೂತರ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವಂತೆ ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದು, ಅಧಿವೇಶನದಲ್ಲಿ ಸಿಎಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಿಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಲಕ್ಷ್ಮಣಸಿಂಗ್, ಜಮನ್‌ಸಿಂಗ್, ಗೋವರ್ಧನ್ ಸಿಂಗ್, ವಿನಯ್‌ಸಿಂಗ್, ಪೃಥ್ವಿರಾಜ ಸಿಂಗ್ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















