ಕೊಟ್ಟೂರು: ಪಟ್ಟಣದ ಮುದಕನಕಟ್ಟೆ ಎಂ ಕೊಟ್ರಯ್ಯ ತಂದೆ ಲೇಟ್ ಎಂ ಚನ್ನಬಸಯ್ಯ, 55 ವರ್ಷ, ಜಂಗಮ ಜನಾಂಗ, ವ್ಯವಸಾಯ ವಾಸ-ಮುದಕನಕಟ್ಟೆ ಕೊಟ್ಟೂರು ರವರು ದಿ. 23/07/2026 ರಂದು ಮಧ್ಯಾಹ್ನ 3:30 ಗಂಟೆಗೆ ನಮ್ಮ ಮಗಳು ಎಂ. ಸುಕನ್ಯಾ ತಂದೆ ಕೊಟ್ರಯ್ಯ ವಯಸ್ಸು 23 ವರ್ಷ, ಜಂಗಮ ಜನಾಂಗ, ಹೊಲ ಮನೆ ಕೆಲಸ ಮದುಕನಕಟ್ಟೆಯ ತಮ್ಮ ಮನೆಯಿಂದ ಮಗಳು ಹೋಗಿ ಮರಳಿ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ತಂದೆಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅನ್ವಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 140/2026 ಕಲಂ “ಮಹಿಳೆ ಕಾಣೆ” ರಿತ್ಯಾ ಪ್ರಕರಣ ದಾಖಲಾಗಿದ್ದು ಸದರಿ ಮೇಲ್ಕಂಡ ಮಹಿಳೆಯು ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೇ ಈ ಕೆಳಕಂಡ ನಂಬರ್ ಗಳಿಗೆ ಮಾಹಿತಿ ತಿಳಿಸತಕ್ಕದ್ದು.
ಪಿಎಸ್ಐ ಕೊಟ್ಟೂರು ಪೊಲೀಸ್ ಠಾಣೆ: 9480805783
ವಿಜಯನಗರ ಜಿಲ್ಲಾ ಕಂಟ್ರೋಲ್ ರೂಂ ನಂ. : 9480805700
ವರದಿ:ಕೆ .ಗೋಣೆಪ್ಪ



















