ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ”

ಕೊಟ್ಟೂರು : ತಾಲೂಕು ಪಂಚಾಯೀತಿಯ ಸಭಾಂಗಣದಲ್ಲಿ 13 – 08 – 2026 ರ ಗುರುವಾರದಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅದ್ಯಕ್ಷರಾದ ಹೊಸಮನಿ ಅನಿಲ್ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು, ಗೃಹಲಕ್ಷ್ಮಿ, ಗೃಹ ಜ್ಯೋತಿ , ಶಕ್ತಿ ಯೋಜನೆ ಯುವ ನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಕುರಿತು ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಬಿ. ಆನಂದಕುಮಾರ್ ರವರುಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.

ಅನ್ನಭಾಗ್ಯ : ಅನ್ನಭಾಗ್ಯ ಯೋಜನಾಧಿಕಾರಿಗಳಾದ ಕಮಲಮ್ಮ ಗುಡ್ಡಾಪುರ ಮಾತನಾಡಿ ಈಗಾಗಲೇ ನ್ಯಾಯ ಬೆಲೆ ಅಂಗಡಿಯ ಮುಂಭಾಗದಲ್ಲಿ ಸಮಯದ ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ ಹಾಗೂ ಇಲ್ಲಿಯವರೆಗೂ ಯಾರು ಇ- ಕೆವೈಸಿ ಮಾಡಿಸಿಲ್ಲವೋ ಅರ್ಹ ಫಲಾನುಭವಿಗಳು ತಕ್ಷಣ ಇಕೆವೈಸಿ ಮಾಡಿಸುವಂತೆ ಪ್ರಚಾರ ಮಾಡಿಸುವುದಾಗಿ ತಿಳಿಸಿದರು.

ಶಕ್ತಿ ಯೋಜನೆ:
ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆದಾರರಿಗೆ ಒಬ್ಬರಿಗೆ ಹತ್ತು ರೂಪಾಯಿಗಳಂತೆ ಅಲ್ಲಿಯ ಸಿಬ್ಬಂದಿ ಹಣಾ ಹೊಸೂಲೆ ಮಾಡುತ್ತಿದ್ದಾರೆ ಕೂಡಲೆ ಆ ಶೌಚಾಲಯದ ಬೆಲೆಯನ್ನು ಕಡಿಮೆ ದರವನ್ನು ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ಯಾರಂಟಿ ಸಮಿತಿಯ ಸದಸ್ಯರು ಒತ್ತಾಯಿಸಿದರು. ಈ ವಿಚಾರವಾಗಿ ಸೂಕ್ತ ಕ್ರಮವಹಿಸುವುದಾಗಿ ಸಾರಿಗೆ ಇಲಾಖೆಯ ಮೇಲ್ವಿಚಾರಣಾ ಅಧಿಕಾರಿ ಹೆಚ್. ಕೆ. ವಿಶ್ವನಾಥ್ ತಿಳಿಸಿದರು.

ಗೃಹಜ್ಯೋತಿ : ಗೃಹಜ್ಯೋತಿ ವಿಚಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಾದ ಜೆಸ್ಕಾಂ ನ ಸಹಾಯಕ ಇಂಜಿನೀಯರ್ ತಿಪ್ಪೇಶ್ ಸಭೆಗೆ ಗೃಹಜ್ಯೋತಿಗೆ ಸಂಬಂಧಪಟ್ಟ ಹಳೆಯ ಅಪ್ಲಿಕೇಷನ್ನಲ್ಲಿಯೇ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ಸಮಿತಿಯ ಸದಸ್ಯರಾದ ಹರೀಶ್ ನಾಯ್ಕ್ ಹಳ್ಳಿಗಳಲ್ಲಿ ಕೊಂಡಿ ಹಾಕುವುದನ್ನು ತಪ್ಪಿಸುವಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದರು, ಹಾಗೆಯೇ ಹಿಂದಿನ ಸಭೆಯಲ್ಲಿ ಗಜಾಪುರ ಗ್ರಾಮದಲ್ಲಿ ಹಳೆಯ ಕಂಬಗಳನ್ನು ಅತೀ ತುರ್ತಾಗಿ ಬದಲಾಯಿಸಬೇಕೆಂದು ಜೆಸ್ಕಾಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನುವಾಗ ಕಾರ್ಯನಿರ್ವಾಹಕ ಅಭಿಯಂತರರಾದ ಆರ್. ನಾಗರಾಜ್ ಅವರು ಕೂಡಲೆ ಹೇಳಿದರು. ಈಗಾಗಲೇ ಕಂಬಗಳನ್ನು ಬದಲಿಸಿರುವುದಾಗಿ ಎಂದು ಸಭೆಗೆ ತಿಳಿಸಿದರು.

ಗೃಹಲಕ್ಷ್ಮಿ : ತಾಲೂಕಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಬಾಕಿ ಹಣವನ್ನು ಸಮಿತಿಯ ಸದಸ್ಯರೊಬ್ಬರು ಪ್ರಶ್ನಿಸಿದಾಗ ಪ್ರತಿಯಾಗಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಮಾಲುಂಬಿ ಯವರು ಏಪ್ರಿಲ್ ಮತ್ತು ಮೇ ತಿಂಗಳ ಬಾಕಿ ಮೊತ್ತವನ್ನು ಆದ್ಯತೆಯ ಮೇರೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದರು, ಮತ್ತು ಈಗಾಗಲೇ ಮರಣ ಹೊಂದಿದ ಫಲಾನುಭವಿಗಳನ್ನು ಪತ್ತೆಹಚ್ಚುವುದಾಗಿ ಹಾಗೂ ಅಂಥವರ ಖಾತೆಗಳಿಗೆ ಹಣಾ ಹೋಗಲಾರದಂತೆ ಕ್ರಮವಹಿಸುವುದಾಗಿ ಮತ್ತು ಪ್ರತೀ ತಿಂಗಳು ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಕಾರ್ಯಧರ್ಶಿಗಳಾದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಕೊಟ್ಟೂರು ಡಾ. ಬಿ ಆನಂದ ಕುಮಾರ್, ಸಮಿತಿಯ ಸದಸ್ಯರಾದ ಪ್ರಭುದೇವ್ ಎನ್. ಚಂದ್ರಪ್ಪ, ಶ್ರೀ ಮಾರೆಪ್ಪ ಶ್ರೀಮತಿ ಗಾಯತ್ರಿ ಎ. ಎನ್. ಪಿ. ಕೆ. ಇಂದ್ರಜಿತ್, ಮಾಲ್ವಿ ಜಮೀರ್ ಖಾನ್, ಉಮಾಪತಿ ಸ್ವಾಮಿ, ಎಂ. ಎಂ. ಹರೀಶ್ ನಾಯ್ಕ್, ನಾಗಪ್ಪ ಟಿ. ಬಿ. ಬಸವರಾಜ್ ಅಂಬಳಿ ಹಾಗೂ ತಾಲೂಕು ಪಂಚಾಯಿತಿಯ ವಿಷಯ ನಿರ್ವಾಹಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ ಗೋಣೆಪ್ಪ ಕೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!