ಕಾಳಗಿ : ದಲಿತ ಸೇನೆಯ ರಾಜ್ಯ ಅಧ್ಯಕ್ಷರು ಹಾಗೂ ಖ್ಯಾತ ನ್ಯಾಯವಾದಿಗಳಾದ ಹನುಮಂತ್ ಜಿ. ಯಳಸಂಗಿ ರವರ ಆದೇಶ ಮೇರೆಗೆ ಹಾಗೂ ಜಿಲ್ಲಾ ಅಧ್ಯಕ್ಷರು ಮಂಜುನಾಥ್ ಭಂಡಾರಿ ಹಾಗೂ ಕಾಳಗಿ ತಾಲೂಕಿನ ದಲಿತ ಸೇನೆ ಅಧ್ಯಕ್ಷರಾದ ಖತಲಪ್ಪ ಅಂಕನ್ ಅವರ ನೇತೃತ್ವದಲ್ಲಿ ಕಾಳಗಿ ತಾಲೂಕಿನ ದಲಿತ ಸೇನೆ ಯುವ ಘಟಕ ಅಧ್ಯಕ್ಷರಾಗಿ ರಮೇಶ್ ಎಸ್ ಕುಡಹಳ್ಳಿ ಅವರನ್ನು ನೇಮಕ ಮಾಡಲಾಗಿದೆ ಹಾಗೂ ಜೈಭೀಮ್ ತಾಡಪಳ್ಳಿ ಅವರನ್ನು ದಲಿತ ಸೇನೆ ತಾಲೂಕ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಪ್ರಕಟಣೆಯಲ್ಲಿ ಎಂದು ತಿಳಿಸಿದ್ದಾರೆ.
ಸಂಘಟನೆಯಲ್ಲಿ ಸಾಮಾಜಿಕ ಜಾಲತಾಣ ಅಧ್ಯಕ್ಷರು ರಮೇಶ್ ಕುಡಹಳ್ಳಿ ಒಳ್ಳೆಯ ಜನಪರ ಕೆಲಸಗಳನ್ನು ಗುರುತಿಸಿ ಅವರನ್ನು ಯುವ ಘ ಅಧ್ಯಕ್ಷರಾಗಿ ನೇಮಕ ಮಾಡಿದ್ದೇವೆ ಆದಕಾರಣ ಅವರು ಸಂಘಟನೆ ಹೆಚ್ಚಿನ ಜವಾಬ್ದಾರಿಯಿಂದ ಸಂಘಟನೆ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ವ್ಯಕ್ತಿಯಾಗಿದ್ದಾರೆ ಹಾಗೂ ಗೌರವಾಧ್ಯಕ್ಷರು ಅವರು ಹಿಂದೆ ಹಲವಾರು ಜನಪರ ಕೆಲಸ ಮಾಡಿದ್ದಾರೆ ಅವರು ಕೂಡ ಒಳ್ಳೆ ರೀತಿಯಯಲ್ಲಿ ಸಂಘಟನೆ ಮುನ್ನಡಿಸಬೇಕು ಎಂದು ಜಿಲ್ಲಾ ಅಧ್ಯಕ್ಷರು ಮಂಜುನಾಥ್ ಭಂಡಾರಿ ಮಾತನಾಡಿದರು.
ತಾಲೂಕ ಯುವ ಘಟಕ ಅಧ್ಯಕ್ಷರಾಗಿ ರಮೇಶ್ ಎಸ್ ಕುಡಹಳ್ಳಿ, ಗೌರವ ಅಧ್ಯಕ್ಷರಾಗಿ ಜೈಭೀಮ್ ತಾಡಪಳ್ಳಿ ಅವರನ್ನು ನೇಮಕ ಆದೇಶಿಸಲಾಯಿತು.
ಸಂದರ್ಭದಲ್ಲಿ ಅರವಿಂದ್ ಕಮಲಾಪುರ್, ಕಪಿಲ್ ವಾಲಿ,ಸುನಿಲ್ ಸಿಂದೆ,ಶಿವು ಸಂಗೊಳ್ಳಿ,ಆಕಾಶ್ ಹೆಬ್ಬಾಳ, ಸುನಿಲ್ ತ್ರಿಪಾಟಿ, ಅನಿಲ ಗಂಜಗಿರಿ, ರಘು, ತುಕಾರಾಮ್ ಗಂಜಗಿರಿ ಉಪಸ್ಥಿತರಿದ್ದರು.
ವರದಿ : ಚಂದ್ರಶೇಖರ ಆರ್. ಪಾಟೀಲ್




















