ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲಚ್ಯಾಣ ಹೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ

ಗೃಹ ಜ್ಯೋತಿ ಸರ್ವೇ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ಸೂಚನೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಹೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಶಾಖಾಧಿಕಾರಿಗಳಾದ ಆರ್ ಆರ್ ಲಾಳಸಂಗಿ ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಕಂಪನಿ ಆರ್ಥಿಕ ಸ್ಥಿತಿಯು ಅಷ್ಟೊಂದು ಸರಿಯಾಗಿ ಇರೋದಿಲ್ಲ ಆದ ಕಾರಣ ಕಂಪನಿಗೆ ಬರಬೇಕಾದ ಬಾಕಿ ವಸೂಲಾತಿ ಮಾಡಬೇಕು, ಅದರ ಜೊತೆಗೆ ಲೈನ್ ಲಾಸ್ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗೃಹ ಜ್ಯೋತಿ ಸರ್ವೆಯ ಕೊನೆಯ ದಿನಾಂಕ 31/08/2026 ಇರುವದರಿಂದ ಅದರೊಳಗೆ ಎಲ್ಲರೂ ಕೂಡಿಕೊಂಡು ನೂರಕ್ಕೆ ನೂರರಷ್ಟು ಸರ್ವೇಯನ್ನು ಮುಗಿಸಲೇಬೇಕು ಎಂದು ತಿಳಿಸಿದರು.
ಹೊಸದಾಗಿ ಶಾಖೆಗೆ ಆಗಮಿಸಿದ ಕಿರಿಯ ಪವರ್ ಮೆನ್ ಚೇತನ್ ಕರಾಳೆ ಯವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.
ಪದೋನ್ನತಿ ಹೊಂದಿ ವರ್ಕ್ ಯೂನಿಟ್ ಗೆ ವರ್ಗಾವಣೆಗೊಂಡ ಲಕ್ಷ್ಮಣ್ ಅರಳದಿನ್ನಿ ಅವರಿಗೂ ಸನ್ಮಾನಿಸಿದರು.
ಸಂತೋಷ್ ಬಣಗೊಂಡೇ ಯವರು ಮಾತನಾಡಿ ಎಲ್ಲರೂ ಮುಂಜಾಗೃತಾ ಕ್ರಮ ವಹಿಸಿ ಯಾವುದೇ ಅಪಘಾತ ಆಗದ ಹಾಗೆ ಕಾರ್ಯ ನಿರ್ವಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಖೆಯ ಎಲ್ಲಾ ಪವರ್ ಮೆನ್ ಗಳು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮತ್ತು ಸ್ಟೇಷನ್ ಆಪರೇಟರ್ ಗಳು ಪಾಲ್ಗೊಂಡಿದ್ದರು.

ವರದಿ ಮನೋಜ್ ನಿಂಬಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!