ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ರವಿವಾರ ದಿ. 30ರಂದು ಮುಂಜಾನೆ 9 ಗಂಟೆಗೆ ಕಾಮಧೇನು ಕಲ್ಪಧ್ರಮ ಜಗದ್ಗುರು ಶ್ರೀ ಸಿದ್ಧಾರೂಢರ 97ನೇ ಪುಣ್ಯ ಸ್ಮರಣೆ ಕಾರ್ಯಕ್ರಮವು ಹಾಗೂ 163 ನೇಯ “ಆರೂಢರ” ಪಾದುಕಾ ಪಂಚಾಮೃತ ಅಭಿಷೇಕ. ಸಹಸ್ರ ಬಿಲ್ವಾರ್ಚನೆ, ಓಂಕಾರ. ಭಜನೆ .ವಿವಿಧ ಕಲಾವಿದರಿಂದ ಜನಪದ ಸಂಗೀತ ಕಲಾಮೇಳವು ಜರುಗಲಿದೆ.ಕುಳಲಿ ಸುಕ್ಷೇತ್ರದ ಮೌನ ಯೋಗಿ ಸ್ಥಿತಪ್ರಜ್ಞ ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ರವಿವಾರದ ಸತ್ಸಂಗ ಸಮಾರಂಭವು ನಡೆಯಲಿದೆ ಎಂದು ಪ್ರತಿಷ್ಠಾನದ ಯುವ ಮುಖಂಡ ಶ್ರೀನಿವಾಸ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















