
ಬೀದರ್ ಜಿಲ್ಲೆ ಬಸವಕಲ್ಯಾಣದ ಇತಿಹಾಸ ಪ್ರಸಿದ್ಧ ಸಂಸ್ಥಾನ ಗವಿಮಠದ ಮೂಲ ಒಡೆಯರಾದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಹಾ ತಪಸ್ವಿಗಳು ಎಂದು ನಗರದ ಶ್ರೀ ರಾಜೀವ ಗಾಂಧಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ರುದ್ರೇಶ್ವರ ಗೋರ್ಟಾ ನುಡಿದರು.

ಪ್ರತಿ ವರ್ಷದಂತೆ ಪವಿತ್ರ ಶ್ರಾವಣಮಾಸ ನಿಮಿತ್ಯ ನಗರದ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಆಯೋಜಿಸಿದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತು ಉಪನ್ಯಾಸ ಮಾಲೆಯ ನಿನ್ನೆ ಗುರುವಾರ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ಮಾಡುತ್ತಾ ೧೨ನೇ ಶತಮಾನದ ಶಿವಶರಣರ ಸಮಕಾಲೀನರಾಗಿದ್ದ ಜಗದ್ಗುರು ಘನಲಿಂಗ ರುದ್ರಮುನಿಗಳು ಅವರು ಕರ್ನಾಟದ ಅನೇಕ ಸ್ಥಳಗಳಲ್ಲಿ ಅವರು ಸಂಚರಿಸಿ, ತಪಸ್ಸನ್ನು ಮಾಡಿ, ಧರ್ಮ ಸಂಸ್ಕಾರ ನೀಡಿ ಉಪದೇಶಿಸಿ ಭಕ್ತರನ್ನು ಉದ್ಧರಿಸಿದ ಮಹಾ ತಪಸ್ವಿಗಳು.
ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ ಹಾಗೂ ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಅವರು ಸಂಚರಿಸಿ ತಪಸ್ಸುಗೈದು ಭಕ್ತರನ್ನು ಉದ್ಧರಿಸಿದ ಕುರಿತು ಸರ್ಕಾರ, ವಿಶ್ವ ವಿದ್ಯಾಲಯಗಳು, ಸಂಘ- ಸಮಿತಿಗಳು ಪ್ರಕಟಿಸಿದ ಅನೇಕ ಐತಿಹಾಸಿಕ ದಾಖಲೆಗಳು ಲಭ್ಯವಾಗಿದ್ದು ಈ ಮಹಾ ತಪಸ್ವಿಗಳ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ನುಡಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, “ಜಗದ್ಗುರು ಘನಲಿಂಗ ರುದ್ರಮುನಿ ಶಿವಯೋಗಿಗಳ ದರ್ಶನ ಹಾಗೂ ಆಶೀರ್ವಾದದಿಂದ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ಆಧ್ಯಾತ್ಮಿಕ ಅನುಭವ ದೊರೆಯುತ್ತದೆ ಎಂಬ ನಂಬಿಕೆ ಇಂದಿಗೂ ಅನೇಕ ಭಕ್ತರಲ್ಲಿ ಇದೆ ” ಅನಾರೋಗ್ಯದಿಂದ ಬಳಲುತ್ತಿದ್ದ ಹಲವಾರು ಭಕ್ತರಿಗೆ ವಿಭೂತಿ ಹಾಗೂ ಬಿಲ್ವಪತ್ರಿಯ ಆಶೀರ್ವಾದದಿಂದ ಆರೋಗ್ಯ ಸುಧಾರಿಸಿತು ಎಂಬ ಅನುಭವಗಳನ್ನು ಭಕ್ತರು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಘನಲಿಂಗ ರುದ್ರಮುನಿ ಶಿವಯೋಗಿಗಳು ತಮ್ಮ ಯೋಗಶಕ್ತಿಯ ಮೂಲಕ ದೂರದ ಘಟನೆಗಳನ್ನೂ ಅರಿತುಕೊಂಡು, ಸಂಕಷ್ಟದಲ್ಲಿದ್ದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಅವರು ತಿಳಿಸಿದರು. ಅವರ ಆಧ್ಯಾತ್ಮಿಕ ಸಾಧನೆ, ಯೋಗಶಕ್ತಿ ಹಾಗೂ ಭಕ್ತರ ಮೇಲಿನ ಕರುಣೆ ಇಂದಿಗೂ ಭಕ್ತ ಸಮುದಾಯಕ್ಕೆ ಪ್ರೇರಣೆಯಾಗಿದೆ. ಅವರ ದರ್ಶನ, ಆಶೀರ್ವಾದ ಮತ್ತು ಉಪದೇಶಗಳನ್ನು ಸ್ಮರಿಸುವುದರಿಂದ ಭಕ್ತರಲ್ಲಿ ಆತ್ಮವಿಶ್ವಾಸ ಹಾಗೂ ಧಾರ್ಮಿಕ ಚಿಂತನೆ ಹೆಚ್ಚುತ್ತದೆ ಎಂದು ಹೇಳಿದರು.
ಶ್ರೀ ಚಂದ್ರಕಾಂತ ಬಿರಾದಾರ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ಯಕ್ಕಂಬಾ ಹಾಗೂ ಕರುನಾಡ ಕಂದ ತಾಲೂಕಾ ವರದಿಗಾರರಾದ ಶ್ರೀನಿವಾಸ ಬಿರಾದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀ ಬಸವಂತಪ್ಪಾ ಲವಾರೆ ಸ್ವಾಗತಿಸಿದರು, ಮಲ್ಲಿಕಾರ್ಜುನ ಅಲಗುಡೆ ನಿರೂಪಿಸಿದರು. ಶರಣಬಸಪ್ಪಾ ಅಲುಗುಡೆ ಪ್ರಾರ್ಥನೆ ಗೀತೆ ಹಾಡಿದರು.
ಈ ಕಾರ್ಯಕ್ರಮದಲ್ಲಿ ಶರಣಪ್ಪಾ ಬಿರಾದಾರ, ಎ.ಜಿ ಪಾಟೀಲ, ಲಕ್ಷ್ಮಣ್ಣ ಸಿಂಗ್ ಸಿಂಗಾರೆ, ರಾಕೇಶ ಪುರವಂತ, ಗೋವಿಂದ ರೆಡ್ಡಿ, ಶಿವಶಂಕರ ರಾಮಣ್ಣನವರ, ವಿರೇಶ ಗಡೆದಾರ, ಬಾಬುರಾವ ಚಳಕಾಪುರೆ, ರಾಮಶೆಟ್ಟಿ ಬಿರಾದಾರ, ಶ್ರೀಮತಿ ಸರಸ್ವತಿ ಬೆಂಬಳೆ, ಶ್ರೀಮತಿ ಸವಿತಾ ರಮೇಶ ಸ್ವಾಮಿ, ಶ್ರೀಮತಿ ಸುರೇಖಾ ಸಜ್ಜನಶೆಟ್ಟಿ, ಮಂಜುನಾಥ ಸ್ವಾಮಿ, ಸಂಜು ಕುಮಾರ ಪಂಚಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಶ್ರೀನಿವಾಸ ಬಿರಾದಾರ




















