ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಮೈದಾಳ ಕೆರೆ ಗದ್ದುಗೆ ಅಜ್ಜಯ್ಯ ಕರಿಬಸವೇಶ್ವರ ಸ್ವಾಮಿ ಯವರ 355 ನೇ ಆರಾಧನೆ ಜಯಂತೋತ್ಸವ ಕಾರ್ಯಕ್ರಮ ಜರುಗಿತು.
ಪ್ರಧಾನ ಅರ್ಚಕರು : ಶ್ರೀ ದಾಸಪ್ಪನವರು
ಅರ್ಚಕರು : ಸಿದ್ದೇಶ್
ಕಾರ್ಯದರ್ಶಿ : ಉಗ್ರಪ್ಪ
ಹಾಗೂ ಸರ್ವ ಸದಸ್ಯರುಗಳ ಅಧ್ಯಕ್ಷತೆಯಲ್ಲಿ ಮೈದಾಳ ಕೆರೆ ಗದ್ದುಗೆ ಅಜ್ಜಯ್ಯ ಕರಿಬಸವೇಶ್ವರ ಸ್ವಾಮಿಯವರ 355 ನೇ ಆರಾಧನೆ ಜಯಂತೋತ್ಸವ ದಿನದಂದು ಅದ್ದೂರಿಯಾಗಿ ಅಗ್ನಿ ಹೋಮಕುಂಡ ಮಾಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಹಾಗೂ ಅಜ್ಜಯ್ಯನ ಭಜನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿತ್ತು.
ಭಕ್ತರು ಅಜ್ಜಯ್ಯನ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಂಕಲ್ಪ ಮಾಡಿಕೊಂಡು ಮೂರು ಭಾರಿ ಈ ಕ್ಷೇತ್ರಕ್ಕೆ ಬಂದರೆ ಮಾನಸಿಕ ಅಸ್ಥಿರತೆ, ದೆವ್ವ-ಭೂತದ ಬಾಧೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಇದೆ ಎನ್ನಲಾದ ವ್ಯಕ್ತಿಗಳು ಇಲ್ಲಿಗೆ ಬಂದು ನದಿಯಲ್ಲಿ ಮಿಂದ ನಂತರ ಗುಣಮುಖರಾಗುತ್ತಾರೆ ಎಂಬ ಪ್ರತೀತಿ ಇದೆ.
ವರದಿ : ರವಿಕುಮಾರ್ ಟಿ.




















