ಬಸವಕಲ್ಯಾಣ ತಾಲೂಕಿನ ಗಡಿಯಲ್ಲಿಯ ಬಟಗೇರಾ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಭಾರತಿ ಗೌಡರ ರವರ ಬಗ್ಗೆ ಕಳೆದ ಒಂದು ವರ್ಷದಿಂದ ಗ್ರಾಮಸ್ಥರು ಮತ್ತು ಪಾಲಕರು ಶಾಲಾ ಅವ್ಯವಹಾರ ಮತ್ತು ಕರ್ತವ್ಯಲೋಪ ಆರೋಪಗಳನ್ನು ಮಾಡುತ್ತಲೇ ಇದ್ದು, ಈ ಭಾರತಿ ಮೇಡಂ ರವರು ಮಾತ್ರ ತಮ್ಮ ಹಠ ಬಿಡದೆ ಮೇಲಿಂದ ಮೇಲೆ ಅವ್ಯವಹಾರ ಮಾಡುತ್ತಲೇ ಇದ್ದರು, ಈ ವಿಷಯ ಕುರಿತು ಸ್ಥಳೀಯ ಶಾಸಕರಾದ ಶ್ರೀ ಶರಣಬಸಪ್ಪ ಸಲಗರ ಅವರು ಸ್ವತಃ ಒಮ್ಮೆ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಗಮನಿಸಿ, ಶಾಲೆಯ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿ, ಶಾಲೆಯ ಅಡುಗೆ ಕೋಣೆಯ ಪಕ್ಕದಲ್ಲಿ ಗಲೀಜು ಸೇರಿ ಗಬ್ಬು ನಾರುತ್ತಿದ್ದು, ಅಲ್ಲಿ ಹಂದಿ ನಾಯಿಗಳು ಓಡಾಡುತ್ತಿರುವುದನ್ನು ಕಂಡು ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಜಿಲ್ಲಾ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು ಸಹ ತಲೆಕೆಡಿಸಿಕೊಳ್ಳದ ಭಾರತಿ ಗೌಡರ ಶಾಸಕರ ಮಾತಿಗೂ ಕಿಮ್ಮತ್ತು ನೀಡದೆ ಕಡೆಗಣಿಸಿದ ಮಹಾತಾಯಿ.
ಈಗಾಗಲೇ ಹಲವಾರು ಆರೋಪಗಳು ಕೇಳಿ ಬರುತ್ತಿದ್ದು, ಶಾಲೆಗೆ ಸರಿಯಾಗಿ ಸಮಯಕ್ಕೆ ಬಾರದೇ ಇರುವುದು, ವಾರಕ್ಕೆ ಒಂದೆರಡು ದಿವಸ ಬಂದು ಇಡೀ ವಾರದ ಸಹಿ ಮಾಡುವುದು, ಶಾಲೆಯ ಮುಖ್ಯ ಜವಾಬ್ದಾರಿ ಪ್ರಭಾರಿ ಅತಿಥಿ ಶಿಕ್ಷಕರಿಗೆ ನೀಡಿರುವುದು, ಒಂದೆರಡು ಗಂಟೆ ಕುಳಿತು ಮರಳಿ ಹೊರಡುವುದು, ಲಕ್ಷಾಂತರ ಸಂಬಳ ತೆಗೆದುಕೊಳ್ಳುವ ಇವರು 10 ಸಾವಿರದ ಕೆಲಸ ಕೂಡಾ ಮಾಡದ ಮಹಾತಾಯಿ ಈ ಅಮ್ಮ.
ಇವರ ವಿರುದ್ಧ ಈಗಾಗಲೇ ಹಣದ ದುರುಪಯೋಗ, ಅತಿಥಿ ಶಿಕ್ಷಕರನ್ನು ಪ್ರಭಾರಿ ನೀಡಿದ್ದು, ಶಾಲಾ ಕಾರ್ಯಕ್ರಮ ನಿರ್ವಹಿಸದೆ ಇರುವುದು, ದಾಖಲೆ ನಿರ್ವಹಿಸದೆ ಇರುವುದು, 75% ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯ ಪರೀಕ್ಷೆಯ ಪ್ರವೇಶಾತಿ ಪತ್ರ ನೀಡಿರುವುದು ಮಕ್ಕಳಿಗೆ ಸಮವಸ್ತ್ರ ನೀಡದೆ ಇರುವುದು, ಸ್ಮಾರ್ಟ್ ಕ್ಲಾಸ ತರಗತಿ, ನೀರು ಶುದ್ಧೀಕರಣ ಘಟಕ, ಕಂಪ್ಯೂಟರ್ ಕೋಣೆ, ವಿಜ್ಞಾನ ಪ್ರಯೋಗದ ಕೋಣೆ, ಗ್ರಂಥಾಲಯ ,ಕ್ರೀಡಾ ಸಾಮಗ್ರಿಗಳು, ಇವೆಲ್ಲವೂ ಸೂಕ್ತ ರೀತಿಯಲ್ಲಿ ನಿರ್ವಹಿಸದೆ ದು:ಸ್ಥಿತಿಯಲ್ಲಿ ಕಂಡುಬರುತ್ತಿದ್ದು, ಹಾಗೆ ವಿಜ್ಞಾನದ ಇಕೋ ಕ್ಲಬ್ ಚಟುವಟಿಕೆಗಳನ್ನು ವಿಜ್ಞಾನ ಶಿಕ್ಷಕರ ಮೂಲಕ ಅನುಷ್ಠಾನಗೊಳಿಸದೆ ತಾವೆ ಖುದ್ದಾಗಿ ಶಾಲೆ ಬಂದಂತಹ ಅನುದಾನ 25,000 ರೂಪಾಯಿ ಹಣ ಬ್ಯಾಂಕಿನಿಂದ ಪಡೆದು ದುರುಪಯೋಗ ಪಡಿಸಿಕೊಂಡಿರುತ್ತಾರೆ, ಕ್ರೀಡಾ ಸಾಮಗ್ರಿಗಳಿಗಾಗಿ ಬಂದಿರುವ 39,500 ಅನುದಾನ ಯಾವುದೇ ಸಾಮಗ್ರಿಗಳನ್ನು ಖರೀದಿಸದೆ ತಮ್ಮ ಸ್ವಯಂ ಬಳಕೆ ಮಾಡಿಕೊಂಡಿರುತ್ತಾರೆ, ಹಾಗೂ ಅಕ್ಷರ ದಾಸೋಹ, ಕ್ಷೀರಭಾಗ್ಯ ಯೋಜನೆ, ಬಿಸಿಊಟ ಯೋಜನೆ, ಇಲ್ಲದ ಅನುದಾನ ದುರ್ಬಳಕೆ ಮಾಡಿಕೊಂಡುವುದು ಹೀಗೆ ಹತ್ತು ಹಲವಾರು ಆರೋಪಗಳಿದ್ದರೂ ಕ್ಯಾರೆ ಎನ್ನದ ಭಾರತಿ ಗೌಡರ ಇತ್ತೀಚೆಗೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಅಮಾನತ್ತಾಗಿ 12 ದಿವಸ ಆದರೂ ಸಹ ಮತ್ತೆ ಇತ್ತೀಚೆಗೆ ಶಾಲಾ ಅಭಿವೃದ್ಧಿ ಅನುದಾನದಲ್ಲಿ ಇರುವಂತಹ 20,000 ರೂಪಾಯಿ ಸೆಳೆದು ಕರ್ತವ್ಯ ಲೋಪ ಎಸಗಿ ರಾಜಾರೋಷವಾಗಿ ಆಡಳಿತದ ದುರುಪಯೋಗ ಮಾಡುತ್ತಿರುವುದು ಕಂಡು ಬಂದಿರುತ್ತದೆ, ಮತ್ತೆ ಅಮಾನತ್ತಾದರೂ ಶಾಲೆಯ ಆವರಣದಲ್ಲಿ ಕಂಡು ಬಂದಿರುತ್ತಾರೆ, ಹೀಗಾಗಿ ಅನರ್ಹ ಶಿಕ್ಷಕಿ ಈ ಮಹಾತಾಯಿ ಭಾರತಿ ಗೌಡರನ್ನು ಗ್ರಾಮಸ್ಥರು ಹಾಗೂ ಎಸ್ ಡಿ ಎಂ ಸಿ ಎಲ್ಲರೂ ಸೇರಿ ಅಮಾನತ್ತು ಅಷ್ಟೇ ಅಲ್ಲಾ ವಜಾ ಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ವರದಿ ಶ್ರೀನಿವಾಸ ಬಿರಾದಾರ



















