ಪಲ್ಯಕೆ ಸಿದ್ಧವಿರುವ ಹಸಿರು ಹುರುಳಿಕಾಯಿಗಳು
ಕತ್ತರಿಸಿಟ್ಟ ಕೇಸರಿ ಕ್ಯಾರೆಟ್ಟಿನ ಸಣ್ಣ ತುಣುಕುಗಳು
ಸಿಂಗರಿಸಿರುವ ಬಿಳಿ ಸುಗಂಧರಾಜ ಪುಷ್ಪಗಳು
ನೆತ್ತಿಲಿ ನಗುತಿದೆ ನೇರಳೆಯ ಏಕೈಕ ಸೇವಂತಿಯು
ಶುಭ ಮುಂಜಾವಲಿ ಬಿಡಿಸಿರುವ ಈ ರಂಗೋಲಿಯು
ಮೇಳೈಸಿದೆ ಸುಲಲಿತ ಕಾವ್ಯ ಚಿತ್ತಾರದ ಐಸಿರಿಯು
- ಲಲಿತಾ ಕೆ ಆಚಾರ್, ಬೆಂಗಳೂರು




















