ಕಟ್ಟಿಕೊಂಡೆ ಬಾಳಿ ಬದುಕುವುದಕ್ಕಾಗಿ
ಕಾಡುತಿಹಳು ನಿತ್ಯ ಆಡಂಬರಕ್ಕಾಗಿ
ಕಿವಿಯಲಿ ಹೇಳಿದರೂ ನೀತಿಗಾಗಿ
ಕಿಮ್ಮತ್ತಿಲ್ಲದೆ ವಾದಿಸುಗಳು ಸ್ವಾರ್ಥಕ್ಕಾಗಿ
ಬಂಧುಗಳಿಲ್ಲದೆ ಬಾಳಬೇಕಂತೆ ಒಂಟಿಯಾಗಿ
ಪಟ್ಟಣವೇ ಯೋಗ್ಯವಂತೆ ವಾಸಕ್ಕಾಗಿ
ಮನೆಮಠ ಬಿಟ್ಟು ಏಕಾಂಗಿಯಾಗಿ
ಬರಬೇಕೆನ್ನುತಾಳ ತನಗ ಜತೆಯಾಗಿ
ಹಿಡದದ್ದನ್ನೇ ಹಿಡಿದು ಹಠವಾದಿಯಾಗಿ
ತವರಲ್ಲೆ ಕುಂತಾಳ ಗಟ್ಟಿಯಾಗಿ
ತಿಳಿಸಿದರೂ ತಿಳಿದುಕೊಳ್ಳದೆ ಅಂಧಳಾಗಿ
ಬ್ಯಾಸರಾಗ್ಯಾಳ ಹೇಳುವವರ ಮಾತು ಕೇಳದಂತಾಗಿ
ದುಡದದ್ದೆಲ್ಲ ಬೇಕಂತೆ ತನಗಾಗಿ
ಖರ್ಚಿಲ್ಲದೆ ಉಳಿಸಬೇಕಂತೆ ಸಿರಿಗಾಗಿ
ಬಿಡಿಗಾಸು ಕೊಡದಂತೆ ಮನೆಗಾಗಿ
ಇರಬೇಕಂತೆ ಜತೆಯಲಿ ಏಕಾಂಗಿಯಾಗಿ
ಬಾಳಬೇಕೆನ್ನುವವ ನಾನು ನೀತಿಗಾಗಿ
ದುಡಿದು ಸಲುಹಬಲ್ಲೆನು ಸಮರ್ಥವಾಗಿ
ಬೇರೆಯಾದರೂ ನಮ್ಮೂರಲ್ಲೇ ನೆಮ್ಮದಿಯಾಗಿ
ಬಾಳಬೇಕೆಂದರೂ ಬರಲೊಲ್ಲೆನೆಂದಳು ಹಠಕ್ಕಾಗಿ
- ಕಲ್ಲಪ್ಪ ಕವಳಕೇರಿ ಮಂಗಳೂರು,
(ಕೊಪ್ಪಳ ಜಿಲ್ಲೆ )




















