ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚೆನ್ನಮ್ಮ ಶೌರ್ಯದ ಪ್ರತೀಕ : ಕಣಗಿ

ಹುನಗುಂದ: ಕಿತ್ತೂರು ಚೆನ್ನಮ್ಮ ದೇಶಪ್ರೇಮ, ತ್ಯಾಗ, ಮತ್ತು ಶೌರ್ಯದ ಪ್ರತೀಕ ಎಂದು ಶಿಕ್ಷಕ ಎಸ್ ಎಲ್ ಕಣಗಿ ಹೇಳಿದರು. ಅವರು ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ವಾರ್ಥ ಮತ್ತು ದುರಾಸೆಗಾಗಿ ಭಾರತೀಯ ಸ್ಥಳೀಯ ರಾಜರ ಮೇಲೆ ಕುತಂತ್ರದ ಕಾನೂನು ಬಳಸಿ ಆಸ್ಥಾನಗಳನ್ನು ಕಬಳಿಸುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದದ್ದು ಶೌರ್ಯ ಸಾಹಸ ಮೆರೆದ ಕಿತ್ತೂರು ಚೆನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯಳಾಗಿದ್ದಾಳೆ. ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸಲು ರಣರಂಗದಲ್ಲಿ ವೀರಾವೇಷದಿಂದ ಹೋರಾಡಿ, ದೇಶಪ್ರೇಮ ಮೆರೆದು ಪ್ರಾಣ ತ್ಯಾಗ ಮಾಡಿದ್ದಾಳೆ ಎಂದರು.

ಅತಿಥಿ ಶಿಕ್ಷಕಿ ಈಶ್ವರಿ ಭಜಂತ್ರಿ ಮಾತನಾಡಿ ಬ್ರಿಟಿಷರು ಬಲಿಷ್ಠರನ್ನು ಮಟ್ಟ ಹಾಕಲು ದುರ್ಬಲರಿಗೆ ಬೆಂಬಲ ಮತ್ತು ಸಹಾಯ ಹಸ್ತ ನೀಡಿ ತಮ್ಮ ಬೇಳೆ ಬೇಯಿಸಿಕೊಂಡರು. ಅವರ ಒಳಮರ್ಮ ಅರಿಯದ ಸ್ವಾರ್ಥಿ ಭಾರತೀಯರಿಂದಲೇ ಎರಡು ನೂರು ವರ್ಷ ಭಾರತ ಗುಲಾಮಗಿರಿ ಅನುಭವಿಸಿತು ಎಂದರು.

ಮಕ್ಕಳ ಪರವಾಗಿ ಬಸವ್ವ ಕೊಣ್ಣೂರ, ಶ್ರವಣಕುಮಾರ ಈರಣ್ಣವರ ಮಾತನಾಡಿದರು. ಶಿಕ್ಷಕರಾದ ಎಂ.ಬಿ. ವಂದಾಲಿ, ಅಶೋಕ ಬಳ್ಳಾ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!