ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

​ಗುಳೇದಗುಡ್ಡದಲ್ಲಿ ಅಕ್ಟೋಬರ್ 25 ರಂದು ಶ್ರೀ ವೇಮನರ 197ನೇ ಮಾಸಿಕ ತತ್ವ ಚಿಂತನ ಹಾಗೂ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ

​ಬಾಗಲಕೋಟೆ: ಶ್ರೀ ಹೇಮ-ವೇಮನ ಸದ್ಯೋಧನ ಪೀಠ (ರಿ.), ಬೆನಕಟ್ಟಿ ಇವರ ವತಿಯಿಂದ ‘ಓಂ ಮನೆ ಮನದಲ್ಲಿ’ ಎಂಬ ಆಶಯದೊಂದಿಗೆ ಶ್ರೀ ವೇಮನರ 197ನೇ ಮಾಸಿಕ ತತ್ವ ಚಿಂತನ ಹಾಗೂ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಸಮಾರಂಭವನ್ನು ಅಕ್ಟೋಬರ್ 25 ರಂದು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ​ಗುಳೇದಗುಡ್ಡದ ಬಸವನಗರದಲ್ಲಿರುವ ಶ್ರೀಮತಿ ಶಕುಂತಲಾ ಹಾಗೂ ಶ್ರೀ ಬಸವರಡ್ಡಿ ಕೂಡ್ಲೆಪ್ಪ ರಡ್ಡರ (ಅಲ್ಲೂರ ಎಸ್.ಡಿ.) ಅವರ ಸ್ವ-ಗೃಹದಲ್ಲಿ ರವಿವಾರ ಮುಂಜಾನೆ 10:30 ಗಂಟೆಗೆ ಈ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿದೆ.

​ದಿವ್ಯ ಸಾನಿಧ್ಯ ಹಾಗೂ ಸಾನ್ನಿಧ್ಯ :

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಹಾಯೋಗಿ ವೇಮನ ಸಂಸ್ಥಾನ ಮಠ, ರೆಡ್ಡಿ ಗುರುಪೀಠ, ಎರೆಹೊಸಹಳ್ಳಿಯ ಜಗದ್ಗುರು ಶ್ರೀ ಶ್ರೀ ಶ್ರೀ ವೇಮನಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಗುಳೇದಗುಡ್ಡದ ಮುರಘಾಮಠದ ಶ್ರೀ ಶ್ರೀ ಕಾಶಿನಾಥ ಮಹಾಸ್ವಾಮಿಗಳು ಹಾಗೂ ಮರಡಿಮಠದ ಷ.ಬ್ರ.ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.

​ಗಣ್ಯರ ಉಪಸ್ಥಿತಿ :

ಬಾದಾಮಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎಸ್.ಎ. ಭರಮಗೌಡರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬಾದಾಮಿಯ ಹೇಮ-ವೇಮ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಶ್ರೀ ಡಿ.ಪಿ. ಅಮಲಝರಿ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕರಾದ ಶ್ರೀ ಪ್ರದೀಪ ಗುರುಜಿ ಅವರು ವಿಶೇಷ ಸದ್ಯೋಧನೆ (ಉಪನ್ಯಾಸ) ನೀಡಲಿದ್ದಾರೆ.

​ಸದ್ಯೋಧನ ವಿಷಯ :

ಈ ಸಮಾರಂಭದಲ್ಲಿ “ಬಾಯಿಯಲಿ ಪ್ರೀತಿಸುವವನ ಪೂಜೆ ದೋಷ, ಉಂಚಿ ಪ್ರೀತಿಸುವವನ ಊಹೆ ಲೇಸು ನೆತ್ತಿಯಲಿ ಪ್ರೀತಿಸುವವನ ಭಕ್ತಿಗೆ ಫಲ ವಿಶ್ವದಾಭಿರಾಮ ಕೇಳು ವೇಮ” ಎಂಬ ತತ್ವದ ಕುರಿತು ಚಿಂತನ-ಮಂಥನ ನಡೆಯಲಿದೆ.
​ಶ್ರೀ ಹೇಮ ವೇಮನ ಸದ್ಯೋಧನ ಪೀಠದ ಪದಾಧಿಕಾರಿಗಳಾದ ಟಿ.ಎಚ್. ಸನ್ನಪ್ಪನವರ ಹಾಗೂ ಶ್ರೀಮತಿ ವೆಂಕಮ್ಮ ಶಿವಣ್ಣ ಅಮಾತೆಪ್ಪನವರ ಅವರು ಧರ್ಮಪ್ರೇಮಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಭಕ್ತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.

​ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
​ಟಿ.ಎಚ್. ಸನ್ನಪ್ಪನವರ (ಅಧ್ಯಕ್ಷರು): 9008076008
​ಶ್ರೀಮತಿ ವೆಂಕಮ್ಮ ಶಿವಣ್ಣ ಅಮಾತೆಪ್ಪನವರ: 8105148104 / 9972159657 ಪ್ರಕಟಣೆಯಲ್ಲಿ ಕೋರಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!