ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯಮಟ್ಟದ ಶ್ರೇಷ್ಠ ಪುಸ್ತಕ ಪ್ರಶಸ್ತಿ ಶ್ರೀ ಮುತ್ತು. ಯ. ವಡ್ಡರ ಅವರ ಕೃತಿಗೆ

ಬಾಗಲಕೋಟೆ: ಕರುನಾಡ ಕಲ್ಪವೃಕ್ಷ ಫೌಂಡೇಶನ್ (ರಿ.), ಕರ್ನಾಟಕ ಸಂಸ್ಥೆಯು ಆಯೋಜಿಸಿರುವ ತೃತೀಯ ಕಲ್ಪವೃಕ್ಷ ಸಾಹಿತ್ಯೋತ್ಸವ – 2025-26 ರ ಅಂಗವಾಗಿ ನೀಡಲಾಗುವ ರಾಜ್ಯಮಟ್ಟದ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸಾಹಿತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ವಡ್ಡರ ಅವರು ಬರೆದಿರುವ “ಬದಲಾಗು ನೀ ಬೆಳಕಾಗು ನೀ” ಕೃತಿ ಆಯ್ಕೆಯಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕನಕ ಪ್ರೀತೀಶ್ ಅವರು ತಿಳಿಸಿದ್ದಾರೆ.

ದಿನಾಂಕ 25-10-2026 ರಂದು ಬೆಂಗಳೂರಿನ ಅತ್ತಿಬೆಲೆಯಲ್ಲಿ ಜರುಗಲಿರುವ ತೃತೀಯ ಕಲ್ಪವೃಕ್ಷ ಸಾಹಿತ್ಯೋತ್ಸವದಲ್ಲಿ – ಮಹಿಳಾ ಘಟಕ ಹಾಗೂ ಬೆಂಗಳೂರು ಜಿಲ್ಲಾ ಘಟಕದ ಉದ್ಘಾಟನೆ, ಪಂಚ ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರಧಾನ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಶಿಕ್ಷಕರಾಗಿ ವೃತ್ತಿ, ಸಾಹಿತಿಯಾಗಿ ಪ್ರವೃತ್ತಿ :

ವೃತ್ತಿಯಲ್ಲಿ ಗಣಿತ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತ್ಯ ಸೇವಕರಾಗಿ ಗುರುತಿಸಿಕೊಂಡಿರುವ ಶ್ರೀ ಮುತ್ತು ವಡ್ಡರ ಅವರು ಈವರೆಗೆ _’ಅತೀ ಸರಳ ಗಣಿತ’, ‘ಎಲೆ ಮರೆ ಕಾಯಿಗಳು’, ‘ಸನ್ಮಾರ್ಗದ ದುಂಬಿ’, ‘ಬದಲಾಗು ನೀ ಬೆಳಕಾಗು ನೀ’, ‘ಮೌಲ್ಯದ ಮುತ್ತು’, ‘ದಯಾಮಯಿ ವಸುಮತಿ ಅಮ್ಮ’ ಹಾಗೂ ‘ಆ ಒಂದು ಕ್ಷಣ… ಸಾಧನೆಗಾಗಿ’ ಮುಂತಾದ ಸ್ಫೂರ್ತಿದಾಯಕ ಕೃತಿಗಳನ್ನು ರಚಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅವುಗಳಲ್ಲಿ “ಬದಲಾಗು ನೀ ಬೆಳಕಾಗು ನೀ” ಕೃತಿಯು ಬದುಕಿಗೆ ದಾರಿದೀಪವಾಗುವ ಸ್ಫೂರ್ತಿದಾಯಕ ಲೇಖನಗಳ ಸಂಕಲನವಾಗಿದ್ದು, ಸರಳ ಭಾಷೆಯಲ್ಲಿ ಗಾಢವಾದ ಜೀವನ ಮೌಲ್ಯಗಳನ್ನು ತಿಳಿಸುವ ವಿಶಿಷ್ಟ ಕೃತಿಯಾಗಿದೆ. ಈ ಕೃತಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಶ್ರೇಷ್ಠ ಪುಸ್ತಕ ಪ್ರಶಸ್ತಿ ಲಭಿಸಿರುವುದು ಶಿಕ್ಷಕ ಸಾಹಿತಿ ಮುತ್ತು ವಡ್ಡರ ಅವರ ಸಾಹಿತ್ಯ ಪಯಣಕ್ಕೆ ಸಂದ ಗೌರವವಾಗಿದೆ.

ಪ್ರಶಸ್ತಿ ಪುರಸ್ಕೃತರಾದ ಶ್ರೀ ಮುತ್ತು ವಡ್ಡರ ಅವರನ್ನು ಕರುನಾಡ ಕಲ್ಪವೃಕ್ಷ ಫೌಂಡೇಶನ್ ಹಾಗೂ ಹಲವು ಸಾಹಿತ್ಯಾಭಿಮಾನಿಗಳು ಅಭಿನಂದಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!