ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ತುಂಗಭದ್ರಾ ನೀರು ಹಂಚಿಕೆ ನಿರ್ಧಾರ: ಕಾರ್ಖಾನೆಗಳಿಗಿಂತ ರೈತರ ಹಿತ ಮುಖ್ಯ; ನಿರ್ಧಾರ ಮರು ಪರಿಶೀಲನೆಗೆ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ವಿನಂತಿ”.

ಕೊಪ್ಪಳ / ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನವೆಂಬರ್ 20ರವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ICC) ಕೈಗೊಂಡಿರುವ ತೀರ್ಮಾನವು ಕಲ್ಯಾಣ ಕರ್ನಾಟಕ ಭಾಗದ ಕೃಷಿಕರಲ್ಲಿ ಆತಂಕವನ್ನು ಮೂಡಿಸಿದೆ. ಈ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿರುವ ತುಂಗಭದ್ರಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ಅನ್ನದಾತರ ಜೀವನಾಡಿಯಾಗಿರುವ ಬೆಳೆಗಳನ್ನು ರಕ್ಷಿಸಲು ಪ್ರಸ್ತುತ ನೀರು ಹಂಚಿಕೆ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಶಿವರಾಜ್ ಎಸ್. ತಂಗಡಗಿ ಅವರು ಮತ್ತು ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸಂಸದರು, ಶಾಸಕರು ರೈತರ ನೈಜ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಹೆಜ್ಜೆ ಇಡಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.

ರೈತರ ಹಿತಕ್ಕೆ ಮೊದಲ ಆದ್ಯತೆ ನೀಡಿ :

ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆಗಳು ಕಟಾವಿನ ಹಂತಕ್ಕೆ ತಲುಪುತ್ತಿವೆ. ಈ ಸಮಯದಲ್ಲಿ ನೀರು ಕಡಿತಗೊಳಿಸಿದರೆ ಬೆಳೆಗಳು ಒಣగి ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಹಾಗೂ ಶಾಸಕರು, ಸಂಸದರು ರೈತರ ಹಕ್ಕಿನ ನೀರಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ರೈತರ ಬಾಯಿಗೆ ಮಣ್ಣು ಎರಚಿ, ಅವರ ಹಕ್ಕಿನ ನೀರನ್ನು ಕದಿಯುತ್ತಿರುವ ರೈತರನ್ನು ಹಾಗೂ ಸರ್ಕಾರವನ್ನು ದಾರಿ ತಪ್ಪಿಸುವ ಕಾರ್ಖಾನೆಗಳ ಹಿತಾಸಕ್ತಿಗೆ ಪ್ರಾಶಸ್ತ್ಯ ನೀಡಬಾರದು ಎಂದು ಅವರು ಕೋರಿದ್ದಾರೆ.

ಜನಪ್ರತಿನಿಧಿಗಳ ಹಾಗೂ ಸರ್ಕಾರದ ಗಮನಕ್ಕೆ :

ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆಗಳು ಕಟಾವಿಗೆ ಬರುವ ಈ ನಿರ್ಣಾಯಕ ಹಂತದಲ್ಲಿ ನೀರು ನಿಲ್ಲಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧ.
ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಹಾಗೂ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ಮತ್ತು ಈ ಭಾಗದ ಎಲ್ಲಾ ಶಾಸಕರು, ಸಂಸದರು ಒಟ್ಟಾಗಿ ರೈತರ ಕಷ್ಟಗಳಿಗೆ ಸ್ಪಂದಿಸಬೇಕಿದೆ.

ನವೆಂಬರ್ 20ಕ್ಕೆ ನೀರು ನಿಲ್ಲಿಸಿದರೆ ಲಕ್ಷಾಂತರ ಎಕರೆ ಭತ್ತ ಹಾಗೂ ಇತರೆ ಬೆಳೆಗಳು ಸಂಪೂರ್ಣವಾಗಿ ಒಣಗಿಹೋಗಿ ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿಯುವ ಆತಂಕವಿದೆ, ಆದ್ದರಿಂದ ರೈತರ ನೀರಿನ ಅಗತ್ಯವನ್ನು ಪೂರ್ಣಗೊಳಿಸುವುದು ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರತೆಗೆ ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನೀರು ಹಂಚಿಕೆ ನಿರ್ಧಾರದ ಮರುಪರಿಶೀಲನೆಗೆ ವಿನಂತಿ :

ಕೇವಲ ತಾಂತ್ರಿಕ ಲೆಕ್ಕಾಚಾರಗಳಿಗೆ ಸೀಮಿತವಾಗದೆ, ಜಮೀನುಗಳಲ್ಲಿರುವ ನಿಂತ ಬೆಳೆಗಳ ರಕ್ಷಣೆಗೆ ಬೇಕಾಗುವ ನೀರಿನ ಪ್ರಮಾಣವನ್ನು ಸರಿಯಾಗಿ ಅಂದಾಜಿಸಬೇಕು. ನವೆಂಬರ್ 20ರ ಗಡುವು ರೈತರಲ್ಲಿ ಅಸ್ಥಿರತೆ ಮೂಡಿಸಿರುವುದರಿಂದ, ಎಲ್ಲರ ಹಿತದೃಷ್ಟಿಯಿಂದ ವಿವಾದಕ್ಕೀಡಾಗಿರುವ ಈ ನೀರು ಹಂಚಿಕೆ ನಿರ್ಧಾರವನ್ನು ಸರ್ಕಾರ ತಕ್ಷಣವೇ ಮರುಪರಿಶೀಲಿಸಿ, ರೈತರ ಬೆಳಗಳು ಕೈಗೆ ಬರುವ ರೀತಿಯಲ್ಲಿ ಲೆಕ್ಕಚಾರ ಹಾಕಿ, ನೀರು ಹಂಚಿಕೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತುಂಗಭದ್ರಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ವಿನಂತಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!