ರಬಕವಿ.”ಬನಹಟ್ಟಿ-/ ಮುಧೋಳ :ಸಮೀಪದ ಸುಕ್ಷೇತ್ರ ಹೊಸೂರು ಗ್ರಾಮದ ಶ್ರೀಶಂಕರಾನಂದ ಪರಮಹಂಸರ ಮಠದಲ್ಲಿ 45ನೆಯ ವೇದಾಂತ ಪರಿಷತ್ತಿನ ಅಂಗವಾಗಿ ಪೂರ್ವಭಾವಿಯಾಗಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳಿಂದ ಕಳೆದ ದಿ. 15 ರಂದು ಪ್ರಾರಂಭಗೊಂಡ ಕೈವಲ್ಯ ಪದ್ಧತಿ ವಿಚಾರ ಸಂಕಿರಣ. ನಿಜಗುಣರ ಒಂದು ಪದ್ಯವನ್ನು ಆಯ್ಕೆ ಮಾಡಿಕೊಂಡು ಹತ್ತು ದಿನಗಳಿಂದ ಚಿಂತನವು ಜರುಗುತ್ತಾ ಬಂದಿದೆ.
ನವೆಂಬರ್ ದಿ. 28 ರಂದು ವಿಚಾರ ಸಂಕೀರ್ಣವು ಸಂಪನ್ನಗೊಂಡು. ಇದೇ ನವಂಬರ್ 29. 30. ಡಿಸೆಂಬರ್ ಒಂದರಂದು ಮೂರು ದಿನಗಳ ಕಾಲ ಸಾಧು ಚಕ್ರವರ್ತಿ ವಿಶ್ವ ಕುಟುಂಬಿ, ಸಾಧು ಚಕ್ರವರ್ತಿ, ಜಗದ್ಗುರು ಶ್ರೀ ಶಿವಾನಂದ ಭಾರತಿ ಅಪ್ಪಾಜಿಯವರ ಪಾವನ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಪರಮಾನಂದ ಶ್ರೀಗಳ ಸಮ್ಮುಖದಲ್ಲಿ 45ನೆಯ ವೇದಾಂತ ಪರಿಷತ್ ವು ವಿಜೃಂಭಣೆಯಿಂದ ಜರುಗಲಿದೆ.
ಈ ಪರಿಷತ್ತಿನಲ್ಲಿ ನಾಡಿನ ಹರ. ಗುರು. ಚರಮೂರ್ತಿಗಳು ಭಾಗವಹಿಸಲಿದ್ದು.
ಈ ಸಂದರ್ಭದಲ್ಲಿ “ಶಿವಾನಂದ ಭಾರತಿ ಶ್ರೀಗಳ ತುಲಾಭಾರ. ತೊಟ್ಟಿಲೋತ್ಸವ. ಕಿರೀಟಪೂಜೆ, ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಧಾರ್ಮಿಕ ಕ್ಷೇತ್ರದ ಧುರೀಣರಾದ ತಿಮ್ಮಣ್ಣ ಸಾಹುಕಾರ ನಿಂಗಸಾನಿ ಹಾಗೂ ಶ್ರೀಶೈಲ್ ನಾಗರಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















