ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ ಹಾಗೂ 241ನೇ ಬೆಳದಿಂಗಳ ಕೂಟವನ್ನು ಭಕ್ತಿಭಾವ ಮತ್ತು ಸಡಗರದಿಂದ ಆಚರಣೆ.

ಕೊರಟಗೆರೆ ಸಿದ್ದರ ನಾಡು ತಪೋ ಭೂಮಿ ಸಸ್ಯಕ್ಷೇತ್ರದ ಆವರಣದಲ್ಲಿ ದೀಪಗಳ ಬೆಳಕಿನಿಂದ ಕಂಗೊಳಿಸಿದ ಸುಂದರ ವಾತಾವರಣ ಭಕ್ತರ ಮನಸೂರೆಗೊಂಡಿತು.

ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕತ್ತಲನ್ನು ದೂರ ಮಾಡುವ ಜ್ಞಾನಜ್ಯೋತಿಯನ್ನು ಬೆಳಗಿಸಿ ಭಕ್ತರ ಬಾಳಲ್ಲಿ ದೀಪ ಹಚ್ಚುವ ಮೂಲಕ ಬೆಳಕಾಗಿ ಭಾರತದ ಅತ್ಯಂತ ಪ್ರಸಿದ್ಧಿಯಾಗಿರುವ ಸಸ್ಯ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಧಾರ್ಮಿಕ ಮಹತ್ವವನ್ನು ಸಾರುವ ಈ ದೀಪೋತ್ಸವದಲ್ಲಿ ಭಕ್ತರು ದೀಪಗಳನ್ನು ಬೆಳಗಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ನಡೆದ 241ನೇ ಬೆಳದಿಂಗಳ ಕೂಟವು ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಭಾವನೆ ಮತ್ತು ಭಕ್ತರ ಒಗ್ಗಟ್ಟಿಗೆ ಸಾಕ್ಷಿಯಾಯಿತು. ಭಕ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಆಚರಣೆಗೆ ಮೆರುಗು ನೀಡಿದರು.

ಲಕ್ಷದೀಪೋತ್ಸವವು ಕೇವಲ ದೇವಾಲಯದ ಉತ್ಸವವಲ್ಲ. ಇದು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪವಿತ್ರ ಆಚರಣೆಯಾಗಿದೆ. ಜಾತಿ, ಮತ, ಭೇದಭಾವಗಳನ್ನು ಮರೆತು ಎಲ್ಲರೂ ಒಟ್ಟಾಗಿ ದೀಪ ಬೆಳಗಿಸುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತದೆ.
ಇಂತಹ ಉತ್ಸವಗಳು ಸ್ಥಳೀಯ ಕಲೆ, ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಸೇವಾ ಮನೋಭಾವಕ್ಕೆ ಪ್ರೋತ್ಸಾಹ ನೀಡುತ್ತವೆ. ಯುವಜನತೆ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ, ದೀಪವು ಬೆಳಗುವುದು ಕೆಲವೇ ಕ್ಷಣಗಳಾದರೂ ಅದು ನೀಡುವ ಬೆಳಕು ಅನೇಕರ ಬದುಕಿಗೆ ದಾರಿದೀಪವಾಗಬಲ್ಲದು. ಅದೇ ರೀತಿ ಲಕ್ಷದೀಪೋತ್ಸವವು ಒಂದು ದಿನದ ಧಾರ್ಮಿಕ ಆಚರಣೆಯಾಗಿರದೆ, ವರ್ಷವಿಡೀ ಭಕ್ತಿ, ಧರ್ಮ, ಸಂಸ್ಕೃತಿ ಮತ್ತು ಮಾನವೀಯತೆಯ ಬೆಳಕನ್ನು ನಮ್ಮ ಜೀವನದಲ್ಲಿ ಉಳಿಸಿಕೊಳ್ಳುವ ಸಂಕಲ್ಪವಾಗಬೇಕು.
ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಧಾರ್ಮಿಕ ಪರಂಪರೆಯ ಉಳಿವಿಗಾಗಿ ನಡೆಯುವ ಪ್ರಯತ್ನಗಳು ಭಕ್ತಸಮೂಹಕ್ಕೆ ಪ್ರೇರಣೆಯಾಗಲಿ. ಲಕ್ಷದೀಪೋತ್ಸವದ ದಿವ್ಯ ಬೆಳಕು ಪ್ರತಿಯೊಬ್ಬರ ಮನದ ಅಜ್ಞಾನ, ಅಹಂಕಾರ ಮತ್ತು ದುಃಖದ ಕತ್ತಲೆಯನ್ನು ದೂರ ಮಾಡಿ ಜ್ಞಾನ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ಬೆಳಕನ್ನು ಹರಡಲಿ ಎಂಬುದೇ ವೀರಭದ್ರ ಶಿವಾಜಿ ಸ್ವಾಮೀಜಿಯವರ ಆಶಯ.
“ಒಂದು ದೀಪ ಮತ್ತೊಂದು ದೀಪವನ್ನು ಬೆಳಗಿಸಿದಂತೆ, ಒಬ್ಬರಲ್ಲಿರುವ ಜ್ಞಾನ, ಭಕ್ತಿ ಮತ್ತು ಮಾನವೀಯತೆ ಮತ್ತೊಬ್ಬರ ಬದುಕಿಗೂ ಬೆಳಕಾಗಲಿ.”ಎಂಬುದು ಸ್ವಾಮೀಜಿಯವರ ಆಶಯವಾಣಿಯಾಗಿದೆ.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿಯವರು ಮಾತನಾಡಿ ಸಿದ್ದರಬೆಟ್ಟದ ಮಠದ ಸ್ವಾಮೀಜಿಯವರು ಮಠ ಕಟ್ಟುವ ಕೆಲಸ ಮಾಡಿಲ್ಲ ಭಕ್ತರ ಮನಸ್ಸಿನಲ್ಲಿ ಮಠವನ್ನು ಕಟ್ಟುವಂತಹ ಕೆಲಸ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಇಲ್ಲಿ ನೆರೆಯುವ ಸಾವಿರಾರು ಭಕ್ತರೊಂದರೆ ಸಾಕ್ಷಿ ಮಠವು ವಿದ್ಯೆ, ಜ್ಞಾನ ,ಸಂಸ್ಕೃತಿ, ಧಾರ್ಮಿಕ ಚಿಂತನೆ ,ಮೌಲ್ಯಗಳನ್ನು ನೀಡಿ ಎಲ್ಲರಿಗೂ ಸೂಕ್ತ ಜೀವನ ಕಟ್ಟಿಕೊಳ್ಳುವಂತೆ ಮಾಡುವುದೇ ಧರ್ಮದ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೀಪಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ದೀಪವು ಕೇವಲ ಕತ್ತಲೆಯನ್ನು ದೂರ ಮಾಡುವ ಬೆಳಕಿನ ಸಂಕೇತವಲ್ಲ; ಅದು ಅಜ್ಞಾನವನ್ನು ದೂರ ಮಾಡಿ ಜ್ಞಾನ, ಭಕ್ತಿ, ಶಾಂತಿ ಮತ್ತು ಸನ್ಮಾರ್ಗದತ್ತ ಕರೆದೊಯ್ಯುವ ದೈವಿಕ ಶಕ್ತಿಯ ಪ್ರತೀಕವಾಗಿದೆ. ಅಂತಹ ಪವಿತ್ರ ಪರಂಪರೆಯ ಪ್ರತಿಬಿಂಬವೇ ಲಕ್ಷದೀಪೋತ್ಸವ.

ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶಾಖ ಮಠದ ಶ್ರೀಕ್ಷೇತ್ರ ಸ್ವಾಮೀಜಿಯವರು ಶಿವಯೋಗಿಶಿವಾನಂದ ಶಿವಾಚಾರ್ಯಸ್ವಾಮೀಜಿಯವರು, ಸಿ
ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ , ಶ್ರೀಡಾ. ಹನುಮಂತನಾಥ ಸ್ವಾಮೀಜಿ ಹಾಗೂ ನಿವೃತ್ತ ಅಧಿಕಾರಿ ದಯಾನಂದ್ ಸರ್, ರವಿಶಂಕರ್ ಸರ್, ಎ. ಡಿ. ಬಲರಾಮಯ್ಯ, ಮಹಾಲಿಂಗಪ್ಪನವರು, ಅರಕೆರೆ ಶಂಕರ್, ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷರು ಮಂಜುನಾಥ್, ರಾಜಣ್ಣ ಎಲ್, ಇನ್ನೂ ಅನೇಕ ಸಮಾಜದ ಮುಖಂಡರು ಹಿರಿಯರು ಭಾಗವಹಿಸಿ ಸ್ವಾಮೀಜಿಯವರ ಅಮೃತವಾಣಿ ಕೇಳಿ ಭಕ್ತರು ದೈವ ಸಂಪನ್ನರಾದರು.

ವರದಿ.ಪ್ರಸನ್ನಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!