ಬೀದರ್ ಜಿಲ್ಲೆಯ ಕಂಗನಕೋಟ ಗ್ರಾಮದಲ್ಲಿ ಸಿದ್ದೇಶ್ವರ ಕಿರಾಣಿ ಅಂಗಡಿಯ ಪೂಜಾ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳು ಓಂಕಾರ ಪಾಟೀಲ ಅವರು ಪೂಜೆ ಎಂದರೆ ಕೇವಲ ದೇವರಿಗೆ ಹೂವು ಹಾಕುವುದಲ್ಲ, ಮಕ್ಕಳ ಭವಿಷ್ಯಕ್ಕೆ ಬೆಳಕು ನೀಡುವುದೂ ಹೌದು ಎಂಬ ಭಾವನೆಯಿಂದ ಈ ಸಣ್ಣ ಸೇವಾ ಕಾರ್ಯವನ್ನು ಮಾಡಲಾಗಿದೆ. ಮಕ್ಕಳು ಚೆನ್ನಾಗಿ ಓದಿ, ದೊಡ್ಡವರಾಗಿ, ನಮ್ಮ ಗ್ರಾಮದ ಹೆಸರನ್ನು ಬೆಳಗಿಸಲಿ ಎಂದು ಮನಸಾರೆ ಹಾರೈಸಿದರು.




















