ಪ್ರಾಚೀನ ಮಗಧ ಸಾಮ್ರಾಜ್ಯದ ರಾಜಗೃಹದ ಸಮೀಪದ ಗ್ರಾಮವೊಂದರಲ್ಲಿ (ನಾಳಕ / ನಾಲಂದಾ ಸಮೀಪದ ಪ್ರದೇಶ) ಶ್ರಿಮಂತ ಕುಟುಂಬದಲ್ಲಿ ಸಾರೀಪತ್ರ ಜನಿಸಿದನು.ಮೂಲ ಹೆಸರು ಉಪತಿಸ್ಸ ಅವನ ತಾಯಿಯ ಹೆಸರು ರೂಪಸಾರಿ (ಶಾರಿ) ಆಗಿದ್ದರಿಂದ ಅವನು ‘ಸಾರಿಪುತ್ರ’ (ಶಾರಿಯ ಮಗ) ಎಂದು ಪ್ರಸಿದ್ಧನಾಗಿದ್ದನು,ಆಗರ್ಭ ಶ್ರೀಮಂತನಾಗಿದ್ದನು,
ತಥಾಗತ ಭೋಧನೆಗಳ ಸೆಳೆತದಿಂದ ಸಾರೀಪುತ್ರ ಬುದ್ಧರ ಶಿಷ್ಯನಾದನು,ಅಪಾರ ಜ್ಞಾನ ಪಡೆದ ಇವನು ಮುಂದೆ ಗೌತಮ ಬುದ್ದರ ಬಲಗೈ ಶಿಷ್ಯನಂತೆ ಗುರ್ತಿಸಿಕೊಂಡಿದ್ದನು. ಬುದ್ಧರ ನಂತರ ಇವನೇ ಎರಡನೇ ಬುದ್ದ ಎಂದು ಭಾವಿಸಲಾಗಿತ್ತು, ಆದರೆ ತಥಾಗತರ ಮೊದಲೆ ಸಾರೀಪುತ್ರ ಪರಿನಿಬ್ಬಾಣ ಹೊಂದಿದನು. ಇವನ ತಾಯಿಗೆ ಬಿಕ್ಕುವಾಗಿರುದಕ್ಕೆ ವಿರೋಧವಿತ್ತು. ಮುಂದೆ ಮಗನ ಬದ್ಧತೆ ಮತ್ತು ಬುದ್ಧತ್ವ ಮೆಚ್ಚಿ ಆಕೆಯೂ ಬಿಕ್ಕುವಾಗುತ್ತಾಳೆ, ಸಾರೀಪುತ್ರ ಅಭಿದಮ್ಮದಲ್ಲಿ ಅಪಾರ ಜ್ಞಾನ ಹೊಂದಿದ್ದನು.
ಒಮ್ಮೆ ಸಾರೀಪುತ್ರರು ಒಂದು ಪ್ರದೇಶದಲ್ಲಿ ಬಿಕ್ಕುಗಳೊಂದಿಗೆ ತಂಗಿದ್ದನು.ಅಲ್ಲಿಯ ಶ್ರದ್ಧಾವಂತ ಭಕ್ತರೊಬ್ಬರು ಸಾರೀಪುತ್ರರಿಗೆ ಅತ್ಯಂತ ರುಚಿಕರವಾದ ಕಜ್ಜಾಯವನ್ನು ದಾನವಾಗಿ ನೀಡಿದರು.
ಸಾರೀಪುತ್ರರಿಗೆ ಕಜ್ಜಾಯ ಎಂದರೆ ತುಂಬಾ ಇಷ್ಟ, ಜೊತೆಗೆ ಅದು ಅತ್ಯಂತ ಸತ್ಕಾರದ ದಾನವೂ ಆಗಿತ್ತು. ಅಲ್ಲಿದ್ದ ಸುಮಾರು 250 ಬಿಕ್ಕುಗಳಿಗೆ ಕಜ್ಜಾಯವನ್ನು ಕೊಡಲಾಯಿತು,ಅದೇ ಸಮಯದಲ್ಲಿ,ತಮ್ಮ ಆಧ್ಯಾತ್ಮಿಕ ಗುರುವಾದ ಅಸ್ಸಾಜಿ ಅವರು ದೂರದ ಮತ್ತೊಂದು ಊರಿನಲ್ಲಿ ಇದ್ದಾರೆ ಎಂಬುದು ಸಾರೀಪುತ್ರರಿಗೆ ತಿಳಿಯಿತು ಅವರಿಗಾಗಿ ಕಜ್ಜಾಯಾ ಇಟ್ಟುಕೊಂಡ್ಡಿದ್ದನು, ಎರಡು ದಿನಗಳ ನಂತರ ಅಸ್ಸಾಜಿ ಕಾಣಿಸಿಕೊಂಡರು ಅವರಿಗೆ ಉಳಿಸಿಕೊಂಡ್ಡಿದ್ದ ಕೊಡಬೇಕಿತ್ತು ಕಜ್ಜಾಯ ಎಂದರೆ ತುಂಬ ಪ್ರಿಯವಾದ ಸಿಹಿಯಾಗಿದ್ದರಿಂದ ಸಾರೀಪುತ್ರ ಸೇವಿಸಿದ್ದನು!. ಯಾವಾಗ ಗುರುಗಳು ಕಜ್ಜಾಯ ಕೇಳಿದರು ಇದರಿಂದ ಮನನೊಂದು ಇನ್ನು ಮುಂದೆ ಕಜ್ಜಾಯವನ್ನೇ ಸೇವನೆ ಮಾಡುವುದಿಲ್ಲ ಎಂದು ಸಾರೀಪುತ್ರ ಶಪಥ ಮಾಡಿದನು..
ಇದು ಬುದ್ಧತ್ವಕ್ಕಿರುವ ಬದ್ಧತೆ ಎಂದರೆ ತಪ್ಪಾಗಲಾರದು.
- ಡಾ. ಸುರೇಶ್ ಎಸ್. ವಡಗಲಪುರ.



















