ಕಾರಟಗಿ : ತಾಲೂಕಿನ ಸಿಂಗನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶ್ರೀ ಕನಕದಾಸರ ಜಯಂತಿಯನ್ನು ಬಹಳ ಸಂಭ್ರಮದಿಂದ ಆಚರಣೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕರಿಯಪ್ಪ ಚಿಗರಿ ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಅಂಬ್ರೇಶಪ್ಪ, ನಿರ್ದೇಶಕರಾದ, ಶ್ರೀಮತಿ ಯಂಕಮ್ಮ, ನಾಗಮ್ಮ ನವಲಿ, ಸುರೇಶ್ ಗೋನಾಳ್, ಸಿದ್ದಪ್ಪ ಕಂಬಳಿ ಮಾಜಿ ಅಧ್ಯಕ್ಷರು, ನಿಂಗಪ್ಪ ಹಟ್ಟಿ, ಕರಿಯಪ್ಪ ತಳವಾರ್, ಹನುಮೇಶ್ ಬಿ, ಸಂಘದ ಸದಸ್ಯರಾದ , ರುದ್ರೇಶ್ ಬಿ, ನಾಗಪ್ಪ ನವಲಿ, ಶ್ರೀ ಗವಿಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷರಾದ ಯಮನೂರ ಮಡಿವಾಳ, ಸಂಘದ ಕಾರ್ಯದರ್ಶಿಯಾದ ಬಸವರಾಜ್ ಲಿಂಗರೆಡ್ಡಿ, ಸಹಾಯಕರಾದ ಗಂಗಪ್ಪ ಹಟ್ಟಿ, ಮಾರುತಿ ಬಿ, ಗ್ರಾಮದ ಸರ್ವ ಸಮಾಜದವರು ಹಾಗೂ ಯುವಕರು ಭಾಗಿಯಾಗಿದ್ದರು.




















