ಕೊಪ್ಪಳ/ ಕಾರಟಗಿ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನಾಳ ಗ್ರಾಮದಲ್ಲಿ ಸಂವಿಧಾನ ದಿನ ಹಾಗೂ ರಾಷ್ಟ್ರೀಯ ಹಾಲು ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಸಂವಿಧಾನದ ಮಹತ್ವವನ್ನು ತಿಳಿಯಲು ಶಾಲಾ ಮಕ್ಕಳೊಂದಿಗೆ ವೇಷಭೂಷಣದೊಂದಿಗೆ ಆಚರಣೆ ಮಾಡಲಾಯಿತು. ನಂತರದಲ್ಲಿ ಶಾಲಾ ಶಿಕ್ಷಕರಾದ ಸೋಮರಾಜ ಮಾತನಾಡಿ ನವೆಂಬರ್ 26 ಅನ್ನು ಭಾರತ ಸರ್ಕಾರವು 2015 ರ ನವೆಂಬರ್ 19 ರಂದು ಗೆಜೆಟ್ ಅಧಿಸೂಚನೆಯ ಮೂಲಕ ಸಂವಿಧಾನ ದಿನವೆಂದು ಘೋಷಿಸಿತು ಎಂದರು. ನಂತರದಲ್ಲಿ ಗ್ರಾಮದ ಹಿರಿಯರಾದ ತಿಮ್ಮಣ್ಣ ಕನಕ ರೆಡ್ಡಿ ಮಾತನಾಡಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015 ರ ಅಕ್ಟೋಬರ್ 11 ರಂದು ಮುಂಬೈನಲ್ಲಿ ಬಿ. ಆರ್. ಅಂಬೇಡ್ಕರ್ ಅವರ ಸಮಾನತೆಯ ಪ್ರತಿಮೆ ಸ್ಮಾರಕದ ಅಡಿಪಾಯ ಹಾಕುವ ಸಂದರ್ಭದಲ್ಲಿ ಘೋಷಣೆ ಮಾಡಿದರು. ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು ಎಂದರು. ಭಾರತದ ಸಂವಿಧಾನವು ದೇಶದ ಗುರಿಗಳು – ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ.
ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ. ಸಂವಿಧಾನವು ೩೭೦ನೇ ವಿಧಿ ಮತ್ತು ಸಂವಿಧಾನ ಆಜ್ಞೆ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಕುರಿತು), ೧೯೫೪ ರಲ್ಲಿ ಒದಗಿಸಲಾದ ಕೆಲವು ಅಪವಾದಗಳು ಮತ್ತು ಬದಲಾವಣೆಗೊಳಪಟ್ಟಿದೆ.
ವಿಶೇಷತೆಯಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ, ಶಾಲಾ ಮಕ್ಕಳಿಗೆ ಹಾಲಿನ ಮಹತ್ವವನ್ನು ಸೋಮರಾಜ್ ಶಿಕ್ಷಕರು ಮಕ್ಕಳಿಗೆ ತಿಳಿಸುವ ಮೂಲಕ ಮಾತನಾಡಿ, ಹಾಲು ಮಾನವರಿಗೆ ರಂಜಕ, ಕ್ಯಾಲ್ಸಿಯಂ, ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಪೊಟ್ಯಾಸಿಯಮ್‌ನ ಆದರ್ಶ ಮೂಲವಾಗಿದೆ. ಡೈರಿ ಉದ್ಯಮವು ಭಾರತದ GDP ಗೆ ಸುಮಾರು 5.3% ಕೊಡುಗೆ ನೀಡುತ್ತದೆ.
ಡಾ. ವರ್ಗೀಸ್ ಕುರಿಯನ್ ಶ್ವೇತ ಕ್ರಾಂತಿಯನ್ನು ತಂದು ಡೈರಿ ಫಾರ್ಮ್ ಅನ್ನು ಭಾರತದ ಅತಿದೊಡ್ಡ ಸ್ವಾವಲಂಬಿ ಉದ್ಯಮವನ್ನಾಗಿ ಮಾಡಿದರು.
ಅವರ ಕೊಡುಗೆಯನ್ನು ಗೌರವಿಸಲು, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 2014 ರ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಿತು.
ರಾಷ್ಟ್ರೀಯ ಹಾಲು ದಿನವು ಮಾನವನ ಜೀವನದಲ್ಲಿ ಹಾಲಿನ ಮಹತ್ವವನ್ನು ಆಚರಿಸುತ್ತದೆ ಮತ್ತು ಹಾಲು ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಹಾಲು ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಡೈರಿ ವಲಯವನ್ನು ಬಲಪಡಿಸುವ ಗುರಿಯನ್ನು NMD ಹೊಂದಿದೆ.
ಭಾರತಕ್ಕೆ ಶ್ವೇತ ಕ್ರಾಂತಿಯನ್ನು ತಂದವರಲ್ಲಿ ಹೆಸರುವಾಸಿಯಾದ ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನದಂದು ಗೌರವ ಸಲ್ಲಿಸಲು ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ .
ಡಾ. ಕುರಿಯನ್ ಅವರ ಕೊಡುಗೆಯಿಂದಾಗಿ ಭಾರತವು 1998 ರಲ್ಲಿ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಯಿತು ಮತ್ತು ಅಮೆರಿಕವನ್ನು ಮೀರಿಸಿತು.
ಡಾ ಕುರಿಯನ್ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿ ಮತ್ತು ಕೃಷಿ ರತ್ನದಂತಹ ಹಲವಾರು ಗೌರವಗಳನ್ನು ನೀಡಲಾಯಿತು ಎಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಾಲು ದಿನದ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಮಿತಿಯಿಂದ ಶಾಲಾ ಮಕ್ಕಳಿಗೆ ಸಿಹಿ ಊಟವನ್ನು ಮಾಡಿಸಲಾಯಿತು. ಗ್ರಾಮದ ಹಿರಿಯರಾದ ತಿಮ್ಮಣ್ಣ ಕನಕ ರೆಡ್ಡಿ, ಸುರೇಶ್ ಗೋನಾಳ್, ನಿಂಗಪ್ಪ ಹಟ್ಟಿ, ಷಣ್ಮುಖಪ್ಪ ಮಾದಿನಾಳ, ಶಾಲಾ ಮುಖ್ಯೋಪಾಧ್ಯರಾದ ಶ್ರೀಮತಿ ಕೃಷ್ಣವೇಣಿ, ತಿಮ್ಮಣ್ಣ ಕನಕರಡ್ಡಿ, ಸೋಮರಾಜ್ ಶಿಕ್ಷಕರು, ಬಸವರಾಜ್ ಶಿಕ್ಷಕರು, ವೆಂಕಟೇಶ್ ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಶಾಲಾ ಶಿಕ್ಷಕಿಯ ಶಿಕ್ಷಕರು ಭಾಗಿಯಾಗಿದ್ದರು.




















