ಹಾವೇರಿ/ಹಾನಗಲ್:ಕಾಂಗ್ರೆಸ್‌ನ ಗ್ಯಾರಂಟಿಗಳು ಬಡವರಿಗೆ ಆರ್ಥಿಕ ಶಕ್ತಿ ತುಂಬಲಿವೆ ಹೊಸ ಸರ್ಕಾರ ರಚನೆಯಾಗಿ ಮೂರು ವಾರ ಕಳೆಯುವುದರ ಒಳಗಾಗಿ ಗ್ಯಾರಂಟಿಗಳು ಜಾರಿಗೆ ಬರುತ್ತಿರುವುದು ಕಾಂಗ್ರೆಸ್ ಪಕ್ಷದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಶಾಸಕರಾದ ಮಾನೆ ಶ್ರೀನಿವಾಸ ಹೇಳಿದರು.
ಹಾನಗಲ್ ನಗರದ ಬಸ್ ನಿಲ್ದಾಣದಲ್ಲಿ ಇಂದು ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು ಶಕ್ತಿ ಯೋಜನೆ ಇಂದು ಜಾರಿಗೆ ಬಂದಿದೆ ಜು.1 ರಿಂದ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗಳು,ಆ.15 ರಿಂದ ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳು ಜಾರಿಗೆ ಬರುತ್ತಿವೆ ಇಷ್ಟೆಲ್ಲ ಬಂದ ಬಳಿಕ ಕೇಂದ್ರದ ₹ 15 ಲಕ್ಷವೂ ಬಡವರ ಖಾತೆಗೆ ಬರಬೇಕಿದೆ.ಕಾಂಗ್ರೆಸ್‌ನ ಗ್ಯಾರಂಟಿ ಬಗೆಗೆ ತಲೆ ಕೆಡಿಸಿಕೊಳ್ಳದೇ ಬಿಜೆಪಿ ತಾನು ಹೇಳಿದಂತೆ ಬಡವರ ಖಾತೆಗೆ ಹಣ ಹಾಕಲು ಮುಂದಾಗಬೇಕಿದೆ ಎಂದರು.
ವರದಿ:ರವಿ ಓಲೆಕಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.