ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಹಿರೇ ನಗನೂರು ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ ವಿತರಣೆ

ರಾಯಚೂರು/ಲಿಂಗಸಗೂರು-ಜೂ 24ರಂದು ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.
ಮೊದಲಿಗೆ ಯುವ ಬೆಂಗಳೂರು ಟ್ರಸ್ಟ್ ಸ್ವಯಂಸೇವಕರಾದ ಚೌರನಾಥ್ ಇವರು ಸಂಸ್ಥೆ ಬಗ್ಗೆ ಕಿರು ಪರಿಚಯ ಮಾಡಿದರು. ಯುವ ಬೆಂಗಳೂರು ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಕಿರಣ್ ಸಾಗರ್ ಮುಖ್ಯ ಕಾರ್ಯದರ್ಶಿಯಾದ ಶ್ವೇತಾ ಕಿರಣ್ ಸಾಗರ್ ಮತ್ತು ಈ ಸಂಸ್ಥೆಯ ಉಪ ಅಧ್ಯಕ್ಷರಾದ ಸುನಿಲ್ ವಿಜಯಕುಮಾರ್ ಇವರಿಗೆ ಪ್ರಥಮವಾಗಿ ಧನ್ಯವಾದಗಳು ಹೇಳಿ ಈ ಸಂಸ್ಥೆಯ ಉದ್ದೇಶ ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ಹಾಗೂ ಸರ್ಕಾರಿ ಶಾಲೆಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಯಾವುದೇ ಫಲ ಅಪೇಕ್ಷೆ ಇಲ್ಲದೆ ಸ್ವಾರ್ಥ ಮನೋಭಾವನೆಯಿಂದ ತಮ್ಮ ಕೈಲಾದ ಸಹಾಯ ಮಾಡುವ ಉದ್ದೇಶ
ಈ ಸಂಸ್ಥೆ ಉದ್ದೇಶವಾಗಿದೆ
ಎಂದು ಹೇಳಿದರು.
ಅದೇ ರೀತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಮಾರ್ಗದರ್ಶನದಿಂದ ಪ್ರಭಾವಿತರಾಗಿ 2008ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿ ಕೇವಲ ಒಂದು ಶಾಲೆಯಿಂದ ಪ್ರಾರಂಭ ಮಾಡಿ ಇವತ್ತು 300ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ತೆಗೆದುಕೊಂಡು ಅದರಲ್ಲಿರುವ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಒಂದು ದೊಡ್ಡ ಸಂಸ್ಥೆ ಇದಾಗಿದೆ ಪ್ರಾರಂಭದಲ್ಲಿ ಹತ್ತು ಜನರ ಸ್ವಯಂ ಸೇವಕರಿಂದ ಕೂಡಿದ ಈ ಸಂಸ್ಥೆ ಇಂದು ಸುಮಾರು 15ರಿಂದ 20 ಸಾವಿರ ಸ್ವಯಂಸೇವಕರಿಂದ ಕೂಡಿದ ಬೃಹತ್ ಸಂಸ್ಥೆಯಾಗಿ ಬೆಂಗಳೂರು,ಮಂಡ್ಯ, ರಾಮನಗರ,ಮಾಗಡಿಯಾದ್ಯಂತ ತನ್ನ ಸ್ವಸಹಾಯ ಕಾರ್ಯವನ್ನು ಮುಂದುವರಿಸುತ್ತಾ ಬಂದಿದೆ ಈ ಸಂಸ್ಥೆಯು ಕೇವಲ ಶಾಲೆ ಅಭಿವೃದ್ಧಿಗೆ ಮತ್ತು ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಶಿಕ್ಷಣದಿಂದ ವಂಚಿತರಾದ ಹಾಗೂ ವೃದ್ಧಾಶ್ರಮ,ಅನಾಥಾಶ್ರಮಗಳಿಗೂ ತನ್ನದೇ ಆದ ಕಾಣಿಕೆಯನ್ನು ನಿರಂತರವಾಗಿ ನೀಡುತ್ತಾ ಬಂದಿದೆ ಎಂದು ಸ್ವಯಂಸೇವಕರಾದ
ಚೌರನಾಥ್ ಸಂಸ್ಥೆ ಬಗ್ಗೆ ಕಿರು ಪರಿಚಯ ಮಾಡಿದರು.
ಆದರೆ ಇಂದು ದೂರದ ಬೆಂಗಳೂರಿನಿಂದ ಪ್ರಯಾಣ ಮಾಡಿದ ಈ ಸಂಸ್ಥೆ ಸುಮಾರು ಐದುನೂರು ಕಿಲೋಮೀಟರ್ ದೂರದ ಲಿಂಗಸಗೂರು ತಾಲೂಕಿನ ಹಿರೇನಗನೂರು ಗ್ರಾಮಕ್ಕೆ ಬಂದು ತಲುಪಿದೆ ಹಿರೇನಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಸಂತೋಷದ ಒಂದು ವಾತಾವರಣ ಮನೆ ಮಾಡಿದೆ ಏಕೆಂದರೆ ಯುವ ಬೆಂಗಳೂರು ಟ್ರಸ್ಟ್ ಸಂಸ್ಥೆಯು ಸರಕಾರಿ ಶಾಲೆಯ ಮಕ್ಕಳಿಗೆ ಬ್ಯಾಗ್ ಪುಸ್ತಕಗಳನ್ನು ವಿತರಣೆ ಮಾಡಿದೆ ಈ ಕಾರ್ಯಕ್ರಮ ಉದ್ದೇಶಿಸಿ ಊರಿನ ಹಿರಿಯರಾದ ಶಿಕ್ಷಣ ಪ್ರೇಮಿಗಳಾದ ಬಸವರಾಜಪ್ಪ ಗೌಡ ಕುರುಗೋಡು ಅವರು ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.ಅದೇ ರೀತಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸೀಬಾರಾಣಿ ಅವರು ಸಂಸ್ಥೆ ಬಗ್ಗೆ ತಮ್ಮ ಅನಿಸಿಕೆ ಹೇಳಿದರು ಹಾಗೂ ಈರಣ್ಣ ಸರ್ ಸಹ ಶಿಕ್ಷಕಿಯರು ಭಾಗವಹಿಸಿದ್ದರು ಅದೇ ರೀತಿ ತಿಮ್ಮನಗೌಡ ಪಾಟೀಲ್ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಗ್ರಾಮ ಪಂಚ ಸದಸ್ಯರು ದಾದಾಪೀರ್,ಮೌನೇಶ್ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ದೇವಪ್ಪ ಮಿಂಚೇರಿ,ಚೆನ್ನಪ್ಪ ಕೊಡ್ರಿಕಿ,ಅಂಬರೀಶ್ ಬೆಂಚಮಟ್ಟಿ,ಶಿಕ್ಷಣ ಪ್ರೇಮಿ ಮೊನದ್ದೀನ್ ಬೂದಿನಾಳ,ಆನಂದ್,ನಿಂಗಪ್ಪ,ಮೋದಿನ ಸಾಬ್,ಹಂಚಿಲಮ್ಮ ಹಾಗೂ ಗ್ರಾಮದ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-ಪುನೀತ ಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ