ಭದ್ರಾವತಿ: ” ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ನಿರಂತರ ಪ್ರಕ್ರಿಯೆ, ಇದಕ್ಕೆ ಬದ್ಧವಾಗಿ ಬಿಎಂಎಸ್ ಕೆಲಸ ಮಾಡುತ್ತಿದೆ” ಎಂದು ಭಾರತೀಯ ಮಜ್ದೂರ್ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಎಚ್.ಎಲ್.ವಿಶ್ವನಾಥ್ ತಿಳಿಸಿದರು.
ಬಿಎಂಎಸ್ 68 ನೇ ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಷ್ಟ್ರದ ಅತಿದೊಡ್ಡ ಕಾರ್ಮಿಕರ ಸಂಘಟನೆಯಾಗಿರುವ ಬಿಎಂಎಸ್ ಅಸಂಘಟಿತ ವಲಯದ ಉದ್ಯೋಗಿಗಳ ರಕ್ಷಣೆಗೆ ಬದ್ಧವಾಗಿ ಕೆಲಸ ಮಾಡುತ್ತಿದೆ”. ಸರ್ಕಾರ ಯಾವುದೇ ಇರಲಿ ಕಾರ್ಮಿಕರ ಹಿತಕ್ಕೆ ವಿರುದ್ಧವಾದ ನಿಲುವುಗಳನ್ನು ವಿರೋಧಿಸುವ ಶಕ್ತಿಯನ್ನು ಬಿಎಂಎಸ್ ಬೆಳೆಸಿಕೊಂಡಿರುವ ಪರಿಣಾಮ ಸಹಜವಾಗಿಯೇ ಬೆಂಬಲ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಬಿಎಂಟಿಸಿ ಬಿಎಂಎಸ್ ಮುಖಂಡ ಮಾದಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ, ಕಟ್ಟಡ ಕಾರ್ಮಿಕರ ಬಿಎಂಎಸ್ ಸಂಘಟನೆಯ ಪಚ್ಚಪ್ಪ, ಮಂಜುನಾಥ್ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ