ಹನೂರು ಪಟ್ಟಣದಲ್ಲಿರುವ ಡಾ, ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜನಾಂಗದ ಮುಖಂಡರು ಏರ್ಪಡಿಸಲಾಗಿದ್ದ ಹನೂರು ವಿಧಾನಸಭಾ ಕ್ಷೇತ್ರದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿಷಯಗಳ ಚಿಂತನ ಮಂಥನ ಜಾಗೃತಿ ಸಮಾವೇಶವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದ್ದರು,
ಹನೂರು ಪಟ್ಟಣದಲ್ಲಿ ಹೊಲೆಯ ಮಾದಿಗ ಜಾಗೃತ ಸಮಾವೇಶ ಮಾಡುತ್ತಿರುವುದು ಖುಷಿ ತಂದಿದೆ ನೀವೆಲ್ಲ ಒಂದಾಗಬೇಕಾಗಿದೆ, ಮೇ ತಿಂಗಳು ಬರುವ ಸಾರ್ವತ್ರಿಕಾ ಚುನಾವಣೆಯಲ್ಲಿ ಸರಿಯಾದ ನಿರ್ಧಾರ ಮಾಡಿ ನಮ್ಮ ಮತಗಳನ್ನು ಚಲಾಯಿಸಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುವ ಪ್ರಕಾರ ನಮ್ಮ ಸಮುದಾಯದವರು ಆಳುವ ಸಮುದಾಯದರಾಗಬೇಕು,ರಾಜ್ಯದ ಕಡಿಮೆ ಜನ ಸಂಖ್ಯೆವುಳ್ಳ ಸಮುದಾಯದವರು ಅನೇಕ ಬಾರಿ ಮುಖ್ಯ ಮಂತ್ರಿಗಳಾಗಿ ಅವರ ಸಮುದಾಯದಗಳ ಮಠ ಮಾನ್ಯ ಅಭಿವೃದ್ಧಿಗಳಿಗೆ ಪೂರಕವಾಗಿ ಕೆಲಸ ಮಾಡಿದ್ದಾರೆ, ಆದರೆ ರಾಜ್ಯದಲ್ಲಿ ಬಹು ಸಂಖ್ಯೆತಾವುಳ್ಳ ಹೊಲೆಯ ಮಾದಿಗ ಸಮುದಾಯದವರು ಇನ್ನೂ ಕೂಡ ಅಧಿಕಾರ ಹಿಡಿಯದೆ ಪರಿ ತಪ್ಪಿಸುತ್ತ ಇದ್ದಾರೆ. ಯಾಕೆಂದರೆ ನಾವು ಮಾನಸಿಕ ಗುಲಾಮಗಿರಿಯಿಂದ ನಮ್ಮನ್ನ ನಾವು ಕೆಲವು ಕೆಲಸಗಳಿಗೆ ಸೀಮಿತಮಾಡಿಕೊಂಡಿದ್ದೇವೆ, ಚುನಾವಣೆ ಸಂಧರ್ಭದಲ್ಲಿ ಕೆಲವು ಪಕ್ಷಗಳಿಗೆ ಗುಲಾಮರಾಗಿದ್ದೇವೆ, ಅಂದು ಅಂಬೇಡ್ಕರ್ ರವರು ಕಷ್ಟಪಟ್ಟು ಎರಡು ಪೀಸ್ ಬ್ರೆಡ್ ತಿಂದು ತಳ ಸಮುದಾಯದವರಿಗಾಗಿ ಹಗಲು ಇರುಳು ಓದಿ ಜ್ಞಾನ ಪಡೆದುಕೊಂಡು ನಮ್ಮ ಏಳಿಗೆಗಾಗಿ ದುಡಿದರು, ಆದರೆ ನಮ್ಮ ಸಮುದಾಯದ ಕೆಲವರು ದುಡ್ಡಿಗಾಗಿ ಪಕ್ಷಗಳ ಗುಲಾಮರಾಗಿ ನಮ್ಮ ಸಮುದಾಯದವರ ಅಭಿವೃದ್ಧಿಗೆ ಮಾರಕರಗಿದ್ದಾರೆ,
ಅಂಬೇಡ್ಕರ್ ರವರ ಕನಸು ಈ ದೇಶದ ಬಹುಸಂಖ್ಯಾತ ಸಮುದಾಯದವರು ಅಧಿಕಾರ ಹಿಡಿಯಬೇಕು ಎನ್ನುವುದಾಗಿತ್ತು ಅದರಂತೆ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಹು ಸಂಖ್ಯಾತವಾಗಿ ದಲಿತರು ಇದ್ದಾರೆ, ಆದ್ದರಿಂದ ಈ ಕ್ಷೇತ್ರದಲ್ಲಿ ನೀವು ಅಧಿಕಾರ ಹಿಡಿಯ ಬೇಕು ಆ ನಿಟ್ಟಿನಲ್ಲಿ ನೀವೆಲ್ಲ ಒಂದಾಗಬೇಕು, ಪಕ್ಷಗಳ ಗುಲಾಮಗಿರಿ ಮಾಡುವವರನ್ನು ಬಿಟ್ಟು ಬಿಡಿ ಅವರು ಗರಿ ಗರಿ ಬಿಳಿ ಬಟ್ಟೆ ಹಾಕಿಕೊಂಡು ಎಲ್ಲರನ್ನೂ ದಿಕ್ಕು ತಪ್ಪಿಸುತ್ತಾರೆ, ಮೊದಲು ಸಾಮಾನ್ಯ ಜನರು ಜಾಗೃತರಾಗಬೇಕು ದಿಕ್ಕು ತಪ್ಪಿಸಿ ತಮ್ಮ ಬೆಳೆ ಬೇಯಿಸಿಕೊಳ್ಳುವವರನ್ನು ದೂರ ಇಟ್ಟು ಜಾಗೃತರಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಆಶಯಗಳು ಜೀವಂತವಾಗಿ ಉಳಿಯುತ್ತವೆ ಆದ್ದರಿಂದ ಮತಗಳನ್ನು ಮಾರಿಕೊಳ್ಳದೆ ಜಾಗ್ರತಾರಾಗಿ ಸರಿಯಾದ ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದ್ದರು
ಈ ಸಂಧರ್ಭದಲ್ಲಿ ಹನೂರು ಕೊಳ್ಳೇಗಾಲ ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ ಬಸವರಾಜು, ಅಧ್ಯಾಪಕರು ಶಾಂತರಾಜು ಮೂರ್ತಿ, ದೊಡ್ದಇಂದವಾಡಿ ಯೋಗೀಶ್, ಚಕ್ರವರ್ತಿ, ದಲಿತ ಕಿರಣ್, ಶಾಗ್ಯ ಮಹೇಶ್, ಸಂಪತ್ ರಾಜ್ , ವಕೀಲ ನಂದಕುಮಾರ್, ಮೊದಲಾದವರು ಇದ್ದರು.
ವರದಿ :ಉಸ್ಮಾನ್ ಖಾನ್ .




















