ಮುಂಡಗೋಡ:ಭಾರತೀಯ ಜನತಾ ಪಕ್ಷದ ರಾಜ್ಯ ನಿಯೋಗದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಬರವಿಕ್ಷಣೆ ನಿಮಿತ್ತ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ,ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಕೆ ಟಿ ನಾಯ್ಕ,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಲ್ ಟಿ ಪಾಟೀಲ್ ಇವರುಗಳ ನೇತೃತ್ವದ ನಿಯೋಗ ಪಾಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಹೊಲಗಳಿಗೆ ಭೇಟಿ ನೀಡಿ,ರೈತರಿಂದ ಮಾಹಿತಿ ಹಾಗೂ ಅಹವಾಲು ಸ್ವೀಕರಿಸಿದರು.




















