ಬಳ್ಳಾರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇಂದು ಬಳ್ಳಾರಿ ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಲಿಖಿತ ಪರೀಕ್ಷೆ ನಿನ್ನೆ ನಡೆಯಿತು.
ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ಮಿಕ್ಕುಳಿದ ವೃಂದ ಹುದ್ದೆಗಳಿಗೆ ಪರೀಕ್ಷೆ ನಡೆದರೆ, ಸಂಜೆ 4 ರಿಂದ 5.30 ಗಂಟೆಯವರೆಗೆ ಸ್ಥಳೀಯ ವೃಂದದ ಹುದ್ದೆಗಳಿಗೆ ಪರೀಕ್ಷೆ ನಡೆದಿದೆ.
ಒಟ್ಟು 15,804 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಿದ್ದರು.
ಬಳ್ಳಾರಿ ನಗರದ 18 ಕೇಂದ್ರಗಳಲ್ಲಿ 11,768 ಅಭ್ಯರ್ಥಿಗಳು, ಸಂಡೂರು ತಾಲೂಕು: 07 ಕೇಂದ್ರಗಳು 4,036 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದರು.
ಬೆಳಿಗ್ಗೆ 8 ಗಂಟೆ ವೇಳೆಗೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಮುಂದೆ ಆಗಮಿಸಿದ್ದರು. ನಗರದ ಸರಳಾದೇವಿ ಕಾಲೇಜು ಮುಂದೆ ನೂರಾರು ಅಭ್ಯ
ರ್ಥಿಗಳು ಸಾಲಾಗಿ ಬಮನದು ಕೊಠಡಿ ಪ್ರವೇಶ ಮಾಡಿದರು. ಬಿಗಿ ಪೊಲೀಸ್ ಕಣ್ಗಾವಲು ಏರ್ಪಡಿಸಲಾಗಿತ್ತು ಶಾಂತ ರೀತಿಯಾಗಿ ಪರೀಕ್ಷೆಗಳು ನಡೆದವು.
ವರದಿ : ಜಿಲಾನಸಾಬ್ ಬಡಿಗೇರ್




















