ಪ್ರೀತಿಯ ಗುಲಾಬಿ ನಗುತಿದೆ ನಡುವಲಿ
ನಕ್ಷತ್ರ ಮಿನುಗಿದೆ ಕಣಿಗಿಲೆ ಮೊಗ್ಗಿನಲಿ
ಶ್ವೇತ ಗರಿಗಳು ಕೂಷ್ಮಾಂಡ ಬೀಜಗಳಲಿ
ಅರಳಿದೆ ಚಿತ್ತಾರವಾಗಿ ಕ್ರಿಯಾಶೀಲ ಕಲೆಯಲಿ
ಇಂದಿನ ಸುಲಲಿತ ಕಟ್ಟೆಯ ಅಂಗಳಕೆ ರಂಗೋಲಿ
ಪುಷ್ಪ ನಕ್ಷತ್ರದ ವರ್ಣನೆ ಶುಭೋದಯ ಕಾವ್ಯದಲಿ
ಹೃನ್ಮನಗಳಲ್ಲಿಗೆ ಬರುತಿದೆ ಸ್ನೇಹದ ಕಡಲಲಿ
ಆಸ್ವಾದಿಸುತ ಸಾಗಲು ದಿನನಿತ್ಯದ ಕಾರ್ಯಗಳಲಿ
- ಲಲಿತಾ ಕೆ ಅಚಾರ್, ಬೆಂಗಳೂರು




















