ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ

ಬೈಲಹೊಂಗಲ: ಕೆಲವು ದಿನಗಳ ಕಾಲ ಗುರು ಮಡಿವಾಳೇಶ್ವರರು ನೆಲೆಸಿದ್ದ ಸಮೀಪದ ಹೊಸೂರ ಗ್ರಾಮದಲ್ಲಿಯ ಅವರ ಪವಾಡ ಹಾಗೂ ಅವರ ಸಂದೇಶದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಇಂದು (ಸೋಮವಾರ) ಗ್ರಾಮದ ಗುರು ಮಡಿವಾಳೇಶ್ವ ಮಠದಲ್ಲಿ ನೆರವೇರಲಿದೆ.
ಅನೇಕ ಪವಾಡಗಳನ್ನು ಮಾಡುವುದರ ಜೊತೆಗೆ ಬಹು ದಿನಗಳ ಕಾಲ ಹೊಸೂರು ಗ್ರಾಮದ ಹಳ್ಳದ ದಡದಲ್ಲಿ ನೆಲೆಸಿದ ನಂತರ ಗ್ರಾಮಸ್ಥರ ಆಸೆಯಂತೆ ಅಲ್ಲೊಂದು ಮಠ ನಿರ್ಮಿಸಲು ಸಹಮತ ವ್ಯಕ್ತಪಡಿಸಿದ ನಂತರ ಹುಲಿ ಮಠದ ನೇತೃತ್ವದಲ್ಲಿ ಮಠ ನಿರ್ಮಿಸಲು ಪ್ರಾರಂಭವಾಗಿತ್ತು ಆ ಸಂದರ್ಭದಲ್ಲಿ ಮಡಿವಾಳೇಶ್ವರರು ಹೊಸೂರು ಗ್ರಾಮವನ್ನು ಹೊನ್ನ ಹೊಸುರವಾಗಲೆಂದು ಹಾರೈಸಿದ್ದರು. ಇದರ ಎಲ್ಲ ಸಂಗ್ರಹದ ರೂಪವಾಗಿ ಸಾಹಿತಿ ಚೆನ್ನಬಸಪ್ಪ ಚೌಗಲಾ ಅವರು ಬರೆದ ಮುರುಗೋಡ ನಾಡಿನ ಹೊನ್ನ ಹೊಸೂರಿನ ಪುಣ್ಯ ಪುರುಷ ಶ್ರೀ ಗುರು ಮಡಿವಾಳೇಶ್ವರ ಗ್ರಂಥ ಲೋಕಾರ್ಪಣೆಗೊಳ್ಳಲಿದೆ
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಶ್ರೀಗಳಾದ ಗಂಗಾಧರ ಮಹಾಸ್ವಾಮಿಗಳು ವಿರಕ್ತ ಮಠದ ಪೂಜ್ಯ ಪ್ರಭುನೀಲಕಂಠ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಕಲಿಗಿ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು ಗ್ರಂಥ ಬಿಡುಗಡೆಯನ್ನು ಹೂಲಿ ಮಠದ ಉಮೇಶ್ವರ ಸ್ವಾಮಿಗಳು ಮಾಡಲಿದ್ದಾರೆ ಕಾರ್ಯಕ್ರಮದ ನೇತೃತ್ವವನ್ನು ಗರಗದ ಪೂಜ್ಯ ಅತ್ಮಾರಾಮ ಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ್ ಮೂಗಬಸವ ಗ್ರಂಥ ರಚನಾಕಾರ ಚನ್ನಬಸಪ್ಪ ಚೌಗಲಾ, ನೈರುತ್ಯ ರೈಲ್ವೆ ವಿಭಾಗದ ನಿರ್ದೇಶಕ ಎಫ್.ಎಸ್ ಸಿದ್ದನಗೌಡರ, ಮಾಜಿ ತಾಪಂ ಸದಸ್ಯ ಜಗದೀಶ ಬುದಿಹಾಳ ಹಾಗೂ ತಾಲೂಕ ಕಸಾಪ ಅಧ್ಯಕ್ಷ ವೈ ಎಂ ಯಾಕೊಳ್ಳಿ ಆಗಮಿಸಲಿದ್ದಾರೆ ಎಂದು ಸಂಘಟನಾಕಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಮಂಜು ಎಂ.ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!