ಬಳ್ಳಾರಿ / ಸಿರುಗುಪ್ಪ : ತಾಲೂಕಿನ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಎಸ್ ಎಸ್ ಎಫ್ ಯುನಿಟ್ ಮಟ್ಟದಲ್ಲಿ ಸಾಹಿತ್ಯೋತ್ಸವಕ್ಕೆ ತೆರೆ.
ಎಸ್ ಎಸ್ ಎಫ್ ಯುನಿಟ್ ಮಟ್ಟದಲ್ಲಿ ಮುನ್ನಡೆಸುತ್ತಿರುವ ಸಾಹಿತ್ಯೋತ್ಸವದ ಯುನಿಟ್ ಮಟ್ಟದ ಸಾಹಿತ್ಯೋತ್ಸವ ಮುದ್ದಟ್ಟನೂರು ಗ್ರಾಮದ ಖುರ್ರತ್ತುಸ್ಸಾದಾತ್ ಸುನ್ನೀ ಮದರಸಾದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯಕ ಮತ್ತು ಕಲಾತ್ಮಕ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಯುನಿಟ್ ವ್ಯಾಪ್ತಿಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ವಿದ್ಯಾರ್ಥಿಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಚಟುವಟಿಕೆಗಳನ್ನು ನಡೆಸಲಾಯಿತು.
ಇಸ್ಲಾಮಿಕ್ ಗೀತೆ, ಭಾಷಣ, ಮಾತುಕತೆ, ಕ್ವಿಜ್, ಕವನ ರಚನೆ, ಕ್ಯಾಲಿಗ್ರಫಿ ಸೇರಿದಂತೆ ಹಲವು ವೈವಿಧ್ಯಮಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭೆಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಸ್ ಎಫ್ ನಾಯಕರಾದ ಸಿದ್ದೀಕ್ ಸಖಾಫಿ, ನವಾಝ ಸಖಾಫಿ,ಆಮಿರ್ ಅಶ್ಅರೀ ಬನ್ನೂರು ಹಿರಿಯರಾದ ಹುಸೈನ್ ಸಾಬ್, ವಲೀ ಸಾಬ್, ಹೊನ್ನೂರು ಸಾಬ್, ಖಲೀಲ್ ಸಾಬ್ ಹಾಗೂ ರಂಜಾನ್ ಸಾಬ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















