ಬೆಂಗಳೂರು: ಚಾಮರಾಜಪೇಟೆಯ ಮಾತಿನ ಮನೆಯಲ್ಲಿ ರೂಪದರ್ಶಿ ಜಿ ವೆಂಕಟೇಶ ಅವರ “ನೆರಳು ಮಾರುವವರು” ಕೃತಿಯನ್ನು ಹಿರಿಯ ಪತ್ರಕರ್ತೆ, ಕಸ್ತೂರಿ ಪತ್ರಿಕೆಯ ಶಾಂತಲಾ ಧರ್ಮರಾಜ್ ಲೋಕಾರ್ಪಣೆ ಮಾಡಿ ಶುಭ ಕೋರಿದರು.
ಲೇಖಕ ಪ್ರೊ ಎಲ್ ಎನ್ ಮುಕುಂದ ರಾಜ್ ಮಾತನಾಡಿ, ಡಾರ್ವಿನ್ ಗಿಂತಲೂ ಮೊದಲೇ ಪಂಪನು ಜೀವ ವಿಕಾಸದ ಬಗ್ಗೆ ಬರೆದಿದ್ದಾನೆ, ಕನ್ನಡ ಸಾಹಿತ್ಯ ಉತ್ಕೃಷ್ಠ ಎಂದು ನುಡಿದರು. ಲೇಖಕ ರೂಪದರ್ಶಿ ವೆಂಕಟೇಶ, ಕಸಾಪ ಬೆಂಗಳೂರು ಜಿಲ್ಲಾಧ್ಯಕ್ಷ ಪ್ರಕಾಶ ಮೂರ್ತಿ ಉಪಸ್ಥಿತರಿದ್ದರು.
ಮಾತಿನ ಮನೆಯ ಶ್ರೀ ರಾ. ಸು. ವೆಂಕಟೇಶ ಅವರು ಲೇಖಕ ಶ್ರೀ ಜಿ. ವೆಂಕಟೇಶ ಅವರನ್ನು ಅಭಿನಂದಿಸಿ ಗೌರವಿಸಿದರು.
ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀಮತಿ ಶಾಂತಲಾ ಅಶೋಕ್ ನಿರ್ವಹಿಸಿ ಚಂದಗಾಣಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















