ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ

ಕಾಳಗಿ ತಾಲೂಕಿನ ಹೆಬ್ಬಾಳ್ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ, ರೈತರ ಧ್ವನಿಯಾಗಿ ಕೆಲಸ ಮಾಡಿ: ವೀರಣ್ಣ ಗಂಗಾಣಿ

ಅಧ್ಯಕ್ಷರಾಗಿ ಮಲ್ಲಿನಾಥ್ ದಂಡಗಿ ತಾಲೂಕಿನ ಕಾರ್ಯದರ್ಶಿಯಾಗಿ ರಮೇಶ ಸಿದ್ದನಾಕ್.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಧ್ಯಕ್ಷ ಅಣವೀರ ಹೆಬ್ಬಾಳ ಆದೇಶದ ಮೇರೆಗೆ ಹೆಬ್ಬಾಳ ಗ್ರಾಮ ಘಟಕದ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.

ಹೆಬ್ಬಾಳ ಗ್ರಾಮದಲ್ಲಿ ಗ್ರಾಮದಲ್ಲಿ ರವಿವಾರ ನಡೆದ ಕರ್ನಾಟಕ = ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೆಬ್ಬಾಳ್ ಗ್ರಾಮ ಘಟಕ ಅಧ್ಯಕ್ಷರಾಗಿ ಮಲ್ಲಿನಾಥ ದಂಡಗಿ ಮತ್ತು ತಾಲೂಕ ಕಾರ್ಯದರ್ಶಿಯಾಗಿ ರಮೇಶ್ ಸಿದ್ದನಾಕ.

ಈ ವೇಳೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮಾತನಾಡಿ, ಆಳುವ ಸರ್ಕಾರಗಳ ಹಾಗೂ ಜನಪ್ರತಿನಿಧಿಗಳ ಕಣ್ಣು ತೆರೆಸುವ ಕೆಲಸ ಮಾಡುವ ನಿಟ್ಟಿನಲ್ಲಿ ರೈತರು ಸಂಘಟಿತರಾಗಬೇಕಿದೆ. ಹೀಗಾಗಿ ರೈತ ಸಂಘದ ನೂತನ ಪದಾಧಿಕಾರಿಗಳು ರೈತರ ಹಿತರಕ್ಷಣೆಗೆ ಸದಾ ಸಿದ್ದರಾಗುವ ಮೂಲಕ ರೈತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘ ಮುಖಂಡರಾದ ಸಿದ್ದು ಗೌಡ ತೆಂಗಳಿ, ಸಿದ್ದರಾಮ್ ಕಣಸೂರ , ಬಸವರಾಜ್ ಅಲ್ಬ, ಅಣ್ಣಾರಾವ್ ಮಡಿವಾಳ, ಮಹೇಶ್ ಶಿವಗೊಳ, ಮಲೆನಾಥ್ ತೇಲಿ ಅಧ್ಯಕ್ಷರು, ಮಶಾಕ್ ಪಟೇಲ್ ರೈತ ಮುಖಂಡ,ಹಣಮಂತ್ ತಮ್ಮಾಣ್ಣಿ, ಕಲ್ಯಾಣಪ್ಪ ತೆಂಗಳಿ, ಪ್ರಕಾಶ್ ಸಿದ್ದನಾಕ್, ನಾಗಯ್ಯ ಮಠಪತಿ, ಪ್ರಕಾಶ್ ಇಟಗಿ, ಅನಿಲ್ ಕೊನಪ್ಪ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!